ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೈತರ ಪ್ರತಿಭಟನೆ : ರಾಗಾ ಗೆ ಟಾಂಗ್ ಕೊಟ್ಟ ಸ್ಮೃತಿ ಇರಾನಿ!

ಮೀರಠ್ : ರಾಷ್ಟ್ರ ರಾಜಧಾನಿಯಲ್ಲಿ ಅನ್ನದಾತರು ಕೇಂದ್ರ ಸರ್ಕಾರ ಜಾರಿ ಮಾಡಿರುವ ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದಾರೆ.

ಇದರ ನಡುವೆ ರಾಜಕೀಯ ಪಕ್ಷಗಳು ಆರೋಪ ಪ್ರತ್ಯಾರೋಪದಲ್ಲಿ ಪರಸ್ಪರ ವಾಗ್ದಾಳಿ ನಡೆಸುವುದರಲ್ಲಿ ಬ್ಯುಜಿಯಾಗಿವೆ

ಸದ್ಯ ಕೇಂದ್ರದ ಕೃಷಿ ಕಾನೂನುಗಳನ್ನು ರಚಿಸಿದವರು ರೈತರಲ್ಲ ಎಂಬ ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, 40 ಇಂಚಿನ ಆಲೂಗಡ್ಡೆ ಬೆಳೆಯುವುದಾಗಿ ಹೇಳಿದವರು ರೈತರೇ ಎಂದು ಪರೋಕ್ಷವಾಗಿ ರಾಹುಲ್ ಗಾಂಧಿ ಟಾಂಗ್ ನೀಡಿದ್ದಾರೆ.

ಉತ್ತರಪ್ರದೇಶದ ಮೀರಠ್ ನಲ್ಲಿ ನಡೆದ ಕಿಸಾನ್ ಸಮ್ಮೇಳನದಲ್ಲಿ ಮಾತನಾಡಿದ ಸ್ಮೃತಿ ಇರಾನಿ, ವಿಪಕ್ಷಗಳು ಕೃಷಿ ಕಾನೂನುಗಳ ಕುರಿತು ಅಪಪ್ರಚಾರ ನಡೆಸುತ್ತಿವೆ ಎಂದು ವಾಗ್ದಾಳಿ ನಡೆಸಿದರು.

ಕೃಷಿ ಕಾನೂನುಗಳನ್ನು ರಚಿಸಿದವರು ರೈತರು ಅಲ್ಲ ಎಂದಾದರೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೇನು ರೈತರೇ ಎಂದು ಪ್ರಶ್ನಿಸಿರುವ ಸ್ಮೃತಿ, ಇಂತಹ ಕ್ಷುಲ್ಲಕ ಹೇಳಿಕೆಗಳನ್ನು ಬಿಟ್ಟು ಕೃಷಿ ಕಾನೂನುಗಳ ಸರಿಯಾದ ಅಧ್ಯಯನ ನಡೆಸಿ ಎಂದು ವಿಪಕ್ಷಗಳಿಗೆ ಸಲಹೆ ನೀಡಿದ್ದಾರೆ.

ರೈತರ ಪರ ಇಷ್ಟುದ್ದ ಭಾಷಣ ಮಾಡುತ್ತಿರುವವರು ತಾವು ಅಧಿಕಾರದಲ್ಲಿದ್ದಾಗ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿರುವ ಜವಳಿ ಸಚಿವೆ, ಮೋದಿ ಸರ್ಕಾರ ರೈತರ ಅಭ್ಯುದಯಕ್ಕಾಗಿ ಹಗಲಿರುಳೂ ಶ್ರಮಿಸುತ್ತಿದೆ ಎಂದು ಹೇಳಿದರು.

Edited By : Nirmala Aralikatti
PublicNext

PublicNext

18/12/2020 07:51 pm

Cinque Terre

59.11 K

Cinque Terre

3

ಸಂಬಂಧಿತ ಸುದ್ದಿ