ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಾಹ್ಮಣರ ಅವಹೇಳನ: ಪಠ್ಯ ವಜಾಗೊಳಿಸಲು ಸೂಚನೆ

ಬೆಂಗಳೂರು- ಆರನೇ ತರಗತಿ ಪಠ್ಯದಲ್ಲಿ ಬ್ರಾಹ್ಮಣರ ಅವಹೇಳನಕಾರಿ ವಿಷಯವನ್ನು ತೆಗೆದುಹಾಕಲು ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ.

ಬ್ರಾಹ್ಮಣ ಸಮುದಾಯದ ಕುರಿತಾಗಿ ಭಾವನೆಗಳನ್ನು ಘಾಸಿಗೊಳಿಸುವ ಅಂಶ 6ನೇ ತರಗತಿ ಪಠ್ಯದಲ್ಲಿದೆ. ಕೂಡಲೇ ಅದನ್ನು ತೆಗೆದುಹಾಕಬೇಕು ಎಂದು ಸಚಿವರು ಸೂಚನೆ ನೀಡಿದ್ದಾರೆ‌.

ಬೇರೆ ತರಗತಿಯ ಪಠ್ಯಗಳಲ್ಲಿ ಈ ರೀತಿಯ ವಿಷಯಗಳು ಇದ್ದಲ್ಲಿ ಅದನ್ನು ಪರಿಶೀಲಿಸಲು ತಜ್ಞರ ಸಮಿತಿಗೆ 15 ದಿನಗಳ ಕಾಲಾವಕಾಶ ನೀಡಲಾಗಿದೆ. ಈ ಬಗ್ಗೆ ಸುರೇಶ್ ಕುಮಾರ್ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರಿಗೆ ನಿರ್ದೇಶನ ನೀಡಿದ್ದಾರೆ.

ಅವಹೇಳನಕಾರಿ ಅಂಶ ತೆಗೆದು ಹಾಕುವ ಬಗ್ಗೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿಯೋಗದ ಪದಾಧಿಕಾರಿಗಳು, ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದರು.

Edited By : Nagaraj Tulugeri
PublicNext

PublicNext

18/12/2020 10:03 am

Cinque Terre

80.11 K

Cinque Terre

26

ಸಂಬಂಧಿತ ಸುದ್ದಿ