ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಭಾಪತಿಗಾಗಿ ಗದ್ದಲ: ರಾಜ್ಯಪಾಲರ ಮೌನವೇಕೆ?

ಬೆಂಗಳೂರು: ವಿಧಾನ ಪರಿಷತ್‌ನಲ್ಲಿ ನಡೆದ ಗದ್ದಲ ಹಾಗೂ ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯದ ಸೂಚನೆ ಸಂದರ್ಭದಲ್ಲಿ ಎದುರಾದ ಗೊಂದಲ ಈಗಲೂ ಮುಂದುವರಿದಿದೆ. ಈ ಸಂಬಂಧ ಬಿಜೆಪಿ ಹಾಗೂ ಜೆಡಿಎಸ್ ನಿಯೋಗ ರಾಜ್ಯಪಾಲರಿಗೆ ಮಂಗಳವಾರವೇ ದೂರು ಸಲ್ಲಿಸಲಾಗಿದೆ. ಕಾನೂನು ಪರಾಮರ್ಶೆ ನಡೆಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ರಾಜ್ಯಪಾಲರು ಹೇಳಿದ್ದರು ಎಂದು ವರದಿಯಾಗಿತ್ತು. ಆದರೆ, ಈ ಬಗ್ಗೆ ರಾಜಭವನದಿಂದ ಯಾವುದೇ ಸಂದೇಶ ಬಂದಿಲ್ಲ ಎನ್ನಲಾಗಿದೆ.

ಈ ಮಧ್ಯೆ ಮುಂದಿನ ಹಂತದಲ್ಲಿ ಸಭಾಪತಿ ಹುದ್ದೆ ವಹಿಸಿಕೊಳ್ಳಬೇಕೊ ಅಥವಾ ಉಪ ಸಭಾಪತಿ ಸ್ಥಾನದಲ್ಲಿ ಮುಂದುವರಿಯಬೇಕೊ ಎಂಬ ಜಿಜ್ಞಾಸೆ ಜೆಡಿಎಸ್‌ಗೆ ಶುರುವಾಗಿದೆ. ಜೆಡಿಎಸ್‌ಗೆ ಸಭಾಪತಿ ಸ್ಥಾನ ಬಿಟ್ಟುಕೊಡಲು ಬಿಜೆಪಿ ಬಯಸಿದೆ. ಅದರಂತೆ ಪರಿಷತ್‌ನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅವರನ್ನು ಆಯ್ಕೆ ಮಾಡಲು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರೂ ಒಲವು ಹೊಂದಿದ್ದಾರೆ ಎನ್ನಲಾಗಿದೆ.

Edited By : Nagaraj Tulugeri
PublicNext

PublicNext

17/12/2020 10:49 pm

Cinque Terre

73.57 K

Cinque Terre

6

ಸಂಬಂಧಿತ ಸುದ್ದಿ