ನವದೆಹಲಿ: ಮಾಸ್ಕ್ ಧರಿಸಲು ನಿರಾಕರಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ವಿಡಿಯೋವೊಂದನ್ನು ಟ್ವೀಟ್ ಮಾಡಿರುವ ಆಮ್ ಆದ್ಮಿ ಪಕ್ಷವು ವ್ಯಂಗ್ಯವಾಡಿದೆ.
ಪ್ರಧಾನಿ ಮೋದಿ ಅವರು, ಕರಕುಶಲ ವಸ್ತುಗಳ ಮಾರಾಟದ ಮಳಿಗೆಗೆ ಭೇಟಿ ನೀಡಿದ್ದರು. ಈ ವೇಳೆ ಮಳಿಗೆಯೊಂದರ ಮಾಲೀಕ ಪ್ರಧಾನಿ ಮೋದಿ ಮಾಸ್ಕ್ ಧರಿಸದೇ ಇರುವುದನ್ನು ಗಮನಿಸಿ ಮಾಸ್ಕ್ ನೀಡುತ್ತಾರೆ. ಆದರೆ ಮೋದಿ ಬೇಡ, ಬೇಡ ಎಂದು ಮುಂದೆ ಸಾಗುತ್ತಾರೆ. ಈ ದೃಶ್ಯವನ್ನು ಸ್ಟಾಲ್‌ನಲ್ಲಿದ್ದ ಕೆಲವರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋವನ್ನು ಆಮ್ ಆದ್ಮಿ ಟ್ವೀಟ್ ಮಾಡಿ, ಪ್ರಧಾನಿ ಮೋದಿಯಂತೆ ಆಗಬೇಡಿ, ಮಾಸ್ಕ್ ಧರಿಸಿ ಎಂದು ಬರೆದುಕೊಂಡು ಟ್ರೋಲ್ ಮಾಡಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
PublicNext
17/12/2020 03:57 pm