ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಲಿಜ ಸಮುದಾಯಕ್ಕೆ ನಿಗಮ ಬೇಕು: ಸಮುದಾಯದಿಂದ ಪ್ರತಿಭಟನೆ ಎಚ್ಚರಿಕೆ

ಕೊರಟಗೆರೆ: ರಾಜ್ಯದಲ್ಲಿ 45ಲಕ್ಷ ಬಲಿಜ ಸಮುದಾಯದ ಜನಸಂಖ್ಯೆ ಇದೆ. ಕೈವಾರ ಅಮರನಾರೇಯಣ ಜಯಂತಿಯಂದು ನಮ್ ಸಮುದಾಯವನ್ನು 3ಎಯಿಂದ 2ಎಗೆ ಸೇರಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದರು. ಈಗ ಕೊಟ್ಟ ಮಾತು ಉಳಿಸಿಕೊಳ್ಳಬೇಕು. ಹಾಗೂ ಬಲಿಜ ಸಮುದಾಯಕ್ಕೆ ಪ್ರತ್ಯೇಕ ನಿಗಮ ಆರಂಭಿಸಬೇಕು ಎಂದು ಕೊರಟಗೆರೆ ಬಲಿಜ ಸಂಘದ ಅಧ್ಯಕ್ಷ ಎನ್.ಪದ್ಮನಾಭ್ ಆಗ್ರಹಿಸಿದರು.

ಪಟ್ಟಣದ ಖಾಸಗಿ ನಿವಾಸದಲ್ಲಿ ಕೊರಟಗೆರೆ ಬಲಿಜ ಸಂಘದ ವತಿಯಿಂದ ಭಾನುವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು. ಕರ್ನಾಟಕದಲ್ಲಿ 44ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ಬಲಿಜ ಸಮುದಾಯ ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ತುಳಿತಕ್ಕೆ ಒಳಗಾಗಿದೆ. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ನಮ್ಮ ಸಮುದಾಯಕ್ಕೆ ಮಾಡಿದ ಅನ್ಯಾಯವನ್ನು ಹಾಲಿ ಮುಖ್ಯಮಂತ್ರಿ ಯಡಿಯೂರಪ್ಪ ಸರಿಪಡಿಸಿ ಬಲಿಜ ಸಮುದಾಯಕ್ಕೆ ನ್ಯಾಯ ನೀಡುವ ಪ್ರಯತ್ನ ಮಾಡಬೇಕಾಗಿದೆ. ಇಲ್ಲವಾದರೆ ಉಗ್ರ ಹೋರಾಟ ಮೂಲಕವೇ ನಮ್ಮ ಹಕ್ಕನ್ನು ಮತ್ತೆ ಪಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದರು.

Edited By : Nagaraj Tulugeri
PublicNext

PublicNext

14/12/2020 02:57 pm

Cinque Terre

44.88 K

Cinque Terre

0

ಸಂಬಂಧಿತ ಸುದ್ದಿ