ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೇಂದ್ರ ಸಂಪುಟದಲ್ಲಿ ಹಲವು ಯೋಜನೆಗೆ ಅನುದಾನ ಮೀಸಲು

ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಕ್ಯಾಬಿನೆಟ್ ಸಭೆಯಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ಇಂದು ನಡೆದ ಕೇಂದ್ರ ಕ್ಯಾಬಿನೆಟ್ ಸಭೆಯಲ್ಲಿ ಕೃಷಿ ಕಾನೂನುಗಳ ಬಗ್ಗೆ ಹಲವು ದಿನಗಳಿಂದ ನಡೆಯುತ್ತಿರುವ ರೈತರ ಪ್ರತಿಭಟನೆ ಕುರಿತು ಚರ್ಚೆಯು ಪ್ರಮುಖ ವಿಷಯವಾಗಿತ್ತು.

-ಪಿಎಂ-ವಾನಿ ಅಡಿಯಲ್ಲಿ ಸಾರ್ವಜನಿಕವಾಗಿ ಫ್ರೀ ವೈ-ಫೈ ಒದಗಿಸುವ ಸೌಲಭ್ಯವನ್ನು ಸರ್ಕಾರ ಪ್ರಕಟಿಸಿದೆ.

ಪಿಎಂ ವೈಫೈ ಆಕ್ಸೆಸ್ ನೆಟ್ ವರ್ಕ್ ಇಂಟರ್ಫೇಸ್ (ಪಿಎಂ-ವಾನಿ) ವೇದಿಕೆಯಡಿ ಯಾವುದೇ ಪರವಾನಗಿ ಶುಲ್ಕವನ್ನು ವಿಧಿಸದೆ ಸಾರ್ವಜನಿಕ ಡೇಟಾ ಕಚೇರಿಗಳ ಮೂಲಕ ಸಾರ್ವಜನಿಕ ವೈ-ಫೈ ಸೇವೆಯನ್ನು ಒದಗಿಸಲು ಮತ್ತು ವೈ-ಫೈ ನೆಟ್ ವರ್ಕ್ಗಳನ್ನು ಸ್ಥಾಪಿಸಿಲು ಕ್ಯಾಬಿನೆಟ್ ಅನುಮೋದನೆ ನೀಡಿದೆ.

- ಎರಡು ವರ್ಷದವರೆಗೆ ಹೊಸ ನೇಮಕಾತಿ ಮಾಡಿಕೊಳ್ಳುವ ಉದ್ಯೋಗದಾತರಿಗೆ, ಉದ್ಯೋಗಿಗಳ ಪರವಾಗಿ 22,810 ಕೋಟಿ ರೂಪಾಯಿಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ.

- ಆತ್ಮನಿರ್ಭರ ಭಾರತ್ ರೋಜ್ ಗಾರ್ ಯೋಜನೆಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ.

- 1 ಕೋಟಿ ದತ್ತಾಂಶ ಕೇಂದ್ರಗಳನ್ನು (ಡೇಟಾ ಸೆಂಟರ್) ಸ್ಥಾಪಿಸಲು ಅನುಮೋದನೆ ಸಿಕ್ಕಿದೆ.

- ಲಕ್ಷದ್ವೀಪಕ್ಕೆ ವೇಗದ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಒದಗಿಸಲು ಜಲಾಂತರ್ಗಾಮಿ ಆಪ್ಟಿಕಲ್ ಫೈಬರ್ ಕೇಬಲ್ ಸ್ಥಾಪನೆ.

- ಎಲ್ಲಾ ಹೊಸ ಔಪಚಾರಿಕ ಉದ್ಯೋಗಗಳಿಗೆ ಸರ್ಕಾರವು ಪ್ರತಿ ಉದ್ಯೋಗಿಗೆ ಮತ್ತು ಉದ್ಯೋಗದಾತರಿಗೆ ಶೇಕಡಾ 12ರಷ್ಟು ಪಾಲನ್ನು ಮರುಪಾವತಿ ಮಾಡಲಿದೆ.

- ಅರುಣಾಚಲ ಪ್ರದೇಶ ಮತ್ತು ಅಸ್ಸಾಂನ ಎರಡು ಜಿಲ್ಲೆಗಳಲ್ಲಿ ಮೊಬೈಲ್ ನೆಟ್ವರ್ಕ್ ಒದಗಿಸಲು ಯುಎಸ್ ಒಎಫ್ ಯೋಜನೆಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ

Edited By : Nirmala Aralikatti
PublicNext

PublicNext

09/12/2020 07:42 pm

Cinque Terre

82.64 K

Cinque Terre

2

ಸಂಬಂಧಿತ ಸುದ್ದಿ