ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಾಕತ್ತಿದ್ರೆ ಗೋವು ಕಡಿಯಲು ಅವಕಾಶ ಕೊಡ್ತೀವಿ ಅಂತ ಹೇಳಿ: ಈಶ್ವರಪ್ಪ ಸವಾಲ್

ಬೆಂಗಳೂರು: ಕಾಂಗ್ರೆಸ್ಸಿನವರು ಮುಂಬರುವ ಗ್ರಾಮ ಪಂಚಾಯ್ತಿ ಚುನಾವಣೆ ಪ್ರಣಾಳಿಕೆಯಲ್ಲಿ ನಾವು ಗೋಹತ್ಯೆ ನಿಷೇಧ ಮಾಡಲ್ಲ ಅಂತ ಹೇಳಲಿ. ತಾಕತ್ತಿದ್ದರೆ ಗೋವು ಕಡಿಯೋಕೆ ಅವಕಾಶ ಕೊಡ್ತೀವಿ ಅಂತ ಘೋಷಣೆ ಮಾಡಲಿ ಎಂದು ಸಚಿವ ಈಶ್ವರಪ್ಪ ಸವಾಲೆಸೆದಿದ್ದಾರೆ.

ವಿಧಾನಸೌಧದಲ್ಲಿ ಲವ್ ಜಿಹಾದ್ ಮತ್ತು ಗೋಹತ್ಯೆ ನಿಷೇಧ ಕಾಯ್ದೆಗೆ ಕಾಂಗ್ರೆಸ್ ವಿರೋಧ ವಿಚಾರಕ್ಕೆ ಪ್ರತಿಕ್ರಿಯಿಸಿ, ಗೋವನ್ನ ನಾವು ತಾಯಿ ಅಂತೀವಿ. ಗೋವನ್ನ ತಾಯಿ ಸ್ವರೂಪ ಅಂತ ನಾವು ಕಾಣ್ತೀವಿ. ನಮ್ಮ ತಾಯಿಗೆ ವಯಸ್ಸಾಯ್ತು ಅಂತ ನಾವು ಎಲ್ಲಾದ್ರು ಬಿಡ್ತೀವಾ?, ಇದನ್ನ ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಲಿ. ನಾವು ಗೋಹತ್ಯೆ ನಿಷೇಧ ಕಾಯ್ದೆ ತಂದೇ ತರುತ್ತೇವೆ ಎಂದು ಖಡಕ್ಕಾಗಿ ಹೇಳಿದರು.

ನಾವು ಅಭಿವೃದ್ಧಿ ಮಾಡಿದ್ದೇವೆ. ಈಗ ಗೋಹತ್ಯೆ ನಿಷೇಧ ಕೂಡ ಮಾಡುವುದಾಗಿ ತಿಳಿಸಿದರು. ಗೋಹತ್ಯೆ ಮಾಡಿ ಅಂತ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರ ಮನೆಯವರಿಗೆ ಹೇಳಲಿ. ಲಕ್ಷ್ಮಿ ಪೂಜೆ ಸಮಯದಲ್ಲಿ ಗೋ ಪೂಜೆ ಮಾಡಬೇಡಿ ಅಂತ ಅವರ ಮನೆಯವರಿಗೆ ಹೇಳಲಿ. ಆಗ ಅವರನ್ನ ಮನೆಗೆ ಸೇರಿಸೊಲ್ಲ, ಅವರಿಗೆ ಊಟ ಹಾಕೊಲ್ಲ ಎಂದರು.

Edited By : Nagaraj Tulugeri
PublicNext

PublicNext

07/12/2020 03:24 pm

Cinque Terre

77.49 K

Cinque Terre

8

ಸಂಬಂಧಿತ ಸುದ್ದಿ