ಹೈದರಾಬಾದ್: ಗ್ರೇಟರ್ ಹೈದರಾಬಾದ್ ಮುನಿಸಿಪಲ್ ಕಾರ್ಪೊರೇಷನ್ (GHMC) ಚುನಾವಣೆಯಲ್ಲಿ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷ ಹೆಚ್ಚಿನ ಸ್ಥಾನ ಗಳಿಸಿ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಬಿಜೆಪಿ ಇದೆ. ಅಚ್ಚರಿ ವಿಚಾರ ಎಂದರೆ, ಎರಡೂ ಪಕ್ಷಗಳ ನಡುವಣ ಒಟ್ಟು ಮತಗಳ ಅಂತರ ಕೇವಲ 10 ಸಾವಿರ ಮಾತ್ರ!
150 ಸ್ಥಾನಗಳು ಇರುವ ಹೈದರಾಬಾದ್ ಮುನಿಸಿಪಲ್ ಕಾರ್ಪೊರೇಶನ್ನಲ್ಲಿ, ಟಿಆರ್ಎಸ್ ಗಳಿಸಿದ್ದು 55 ಸ್ಥಾನ, ಬಿಜೆಪಿಗೆ ಸಿಕ್ಕಿದ್ದು 48 ಸ್ಥಾನ. ಎಐಎಮ್ಐಎಮ್ 44 ಮತ್ತು ಕಾಂಗ್ರೆಸ್ ಎರಡು ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಒಂದು ಸ್ಥಾನದ ಎಣಿಕೆ ನಿಲ್ಲಿಸಲಾಗಿದೆ. ಬಿಜೆಪಿ ಹಾಗೂ ಟಿಆರ್ಎಸ್ ನಡುವಣ ಸ್ಥಾನಗಳ ಅಂತರ ಏನಿದ್ದರೂ, ಮತಗಳ ಅಂತರ ತುಂಬಾನೇ ಕಡಿಮೆ ಇರುವುದು ಕಮಲ ಪಾಳಯಕ್ಕೆ ಹೊಸ ಹುರುಪು ನೀಡಿದೆ.
ಒಟ್ಟು ಚಲಾವಣೆಯಾದ ಮತಗಳ ಪೈಕಿ ಟಿಆರ್ಎಸ್ಗೆ 12.06 ಲಕ್ಷ ಅಥವಾ ಶೇ.35.81 ಸಿಕ್ಕರೆ, ಬಿಜೆಪಿಗೆ 11.95 ಲಕ್ಷ ಅಥವಾ ಶೇ.35.56 ಮತಗಳು ಸಿಕ್ಕಿವೆ. ಇದು ನಿಜಕ್ಕೂ ಟಿಆರ್ಎಸ್ಗೆ ಆಘಾತ ನೀಡುವ ವಿಚಾರವಾಗಿದೆ.
PublicNext
06/12/2020 05:54 pm