ಕಲಬುರಗಿ: ಗ್ರಾಮ ಪಂಚಾಯಿತಿ ಚುನಾವಣೆಗೂ ಮುನ್ನವೇ ಸದಸ್ಯರ ಸ್ಥಾನಗಳು ಬಹಿರಂಗ ಹರಾಜು ಆಗುತ್ತಿರುವ ಪ್ರಕರಣ ಕಲಬುರಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಬಿಳವಾರ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವನ್ನು ಹೊಂದಿದೆ. ಗ್ರಾಮದಲ್ಲಿ 10 ಸದಸ್ಯ ಸ್ಥಾನಗಳಿದ್ದು, ವಾರ್ಡ್ ಸಂಖ್ಯೆ 1ರ ನಾಲ್ಕು ಸ್ಥಾನಗಳಿಗೆ ಬಹಿರಂಗ ಹರಾಜು ಹಾಕಲಾಗಿದೆ. ನಾಲ್ಕು ಸ್ಥಾನಗಳು ಬರೋಬ್ಬರಿ 26.55 ಲಕ್ಷ ರೂಪಾಯಿಗೆ ಹರಾಜು ಮಾಡಲಾಗಿದೆ ಎಂಬ ಮಾಹಿತಿ ಲಭಿಸಿದೆ. ಅಷ್ಟೇ ಅಲ್ಲದೆ ಬಿಳವಾರ ಗ್ರಾಮದಲ್ಲಿ ಹರಾಜು ಕೂಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
PublicNext
06/12/2020 12:49 pm