ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ ಚುರುಕಿನಿಂದ ನಡೆಯುತ್ತಿದೆ. ಆರಂಭದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ ಬಿಜೆಪಿ ಈಗ ಹಿನ್ನಡೆ ಅನುಭವಿಸಿದೆ. 63 ವಾರ್ಡ್‌ಗಳಲ್ಲಿ ಈಗ ಟಿಆರ್‌ಎಸ್ ಮುಂದಿದೆ. ಬಿಜೆಪಿ 49, ಎಐಎಂಐಎಂ 27, ಕಾಂಗ್ರೆಸ್ 3 ವಾರ್ಡ್‌ಗಳಲ್ಲಿ ಮುಂದಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಅಂಚೆಮತ ಎಣಿಕೆಯಲ್ಲಿ ಬಿಜೆಪಿ ಮುಂದಿದೆ. 150 ವಾರ್ಡ್‌ಗಳ ಪೈಕಿ 82ರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದರೆ, ಆಡಳಿತಾರೂಢ ಟಿಆರ್‌ಎಸ್ 31ರಲ್ಲಿ ಮುಂದಿದೆ. ಎಂಐಎಂಐಎಂ 16 ವಾರ್ಡ್‌ಗಳಲ್ಲಿ, ಕಾಂಗ್ರೆಸ್ 2ರಲ್ಲಿ ಮುಂದಿದೆ.
PublicNext
04/12/2020 02:18 pm