ಮೈಸೂರು : ತಾಯಿ ಚಾಮುಂಡೇಶ್ವರಿ ಶಾಪವೇ ಹೆಚ್ ವಿಶ್ವನಾಥ್ ಅವರಿಗೆ ಮಂತ್ರಿ ಸ್ಥಾನ ಕೈ ತಪ್ಪುವಂತೆ ಮಾಡಿದೆ ಎಂದು ಮಾಜಿ ಸಚಿವ ಸಾರಾ ಮಹೇಶ್ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅನರ್ಹರಾಗಿ ಎಂ ಎಲ್ ಸಿ ಆಗಿ ನಾಮನಿರ್ದೇಶನಗೊಂಡಿದ್ದರಿಂದ ಹೆಚ್ ವಿಶ್ವನಾಥ್ ಅವರು ಸಚಿವ ಸ್ಥಾನಕ್ಕೆ ಅನರ್ಹರು ಎಂಬುದಾಗಿ ತೀರ್ಪು ನೀಡಿ ಹೈಕೋರ್ಟ್ ಶಾಕ್ ನೀಡಿದೆ. ಇದು ತಾಯಿ ಚಾಮುಂಡೇಶ್ವರಿ ಶಾಪವೂ ಹೌದು. ವಿಶ್ವನಾಥ್ ಹಣ ಪಡೆದು ಬಿಜೆಪಿ ಸೇರಿದ್ದಾರೆ ಎಂದು ಸಾ. ರಾ ಮಹೇಶ್ ಇದೇ ಸಂದರ್ಭದಲ್ಲಿ ಆರೋಪಿಸಿದರು.
PublicNext
01/12/2020 12:44 pm