ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೈದರಾಬಾದ್ ಹೆಸರು ಭಾಗ್ಯನಗರ ಎಂದು ಬದಲಾವಣೆ: ಯೋಗಿ ಆದಿತ್ಯನಾಥ್‌ಗೆ ಓವೈಸಿ ಎಚ್ಚರಿಕೆ

ಹೈದರಾಬಾದ್: ಹೈದರಾಬಾದ್ ಹೆಸರನ್ನು ಭಾಗ್ಯನಗರ ಎಂದು ಬದಲಾಯಿಸುವುದಾಗಿ ಸಂಸದ ತೇಜಸ್ವಿ ಸೂರ್ಯ ಘೋಷಸಿದ್ದರು. ಈ ಬೆನ್ನಲ್ಲೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶನಿವಾರ ಸಂಜೆ ಭರ್ಜರಿ ರೋಡ್ ಶೋನಲ್ಲಿ ಇದೇ ಘೋಷಣೆ ಮಾಡಿದ್ದಾರೆ. ಹೀಗಾಗಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಯುಪಿ ಸಿಎಂ ವಿರುದ್ಧ ಕಿಡಿಕಾರಿದ್ದಾರೆ.

'ಹೈದರಾಬಾದ್ ಹೆಸರನ್ನು ಬದಲಾಯಿಸಲು ಯತ್ನಿಸುವವರ ಸಂತತಿಯೇ ನಶಿಸಿ ಹೋಗುತ್ತದೆಯೇ ಹೊರತು ಹೆಸರು ಬದಲಾಯಿಸಲು ಸಾಧ್ಯವಿಲ್ಲ. ನಾವು ಹೆಸರು ಬದಲಾಯಿಸಲು ಬಿಡುವುದಿಲ್ಲ. ಹೈದರಾಬಾದ್ ನಗರದ ಹೆಸರನ್ನು ಬದಲಾಯಿಸಲು ಹೊರಟವರಿಗೆ ನಿಮ್ಮ ಮತದ ಮೂಲಕ ಉತ್ತರ ನೀಡಿ. ನನಗೆ ಯಾಕೋ ಇದು ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆ ಬದಲಿಗೆ ನಾವು ಪ್ರಧಾನಿ ಆಯ್ಕೆಯಾಗಿ ನಡೆಸುವ ಚುನಾವಣೆಯಂತೆ ತೋರುತ್ತಿದೆ' ಎಂದು ಓವೈಸಿ ಟಾಂಗ್ ಕೊಟ್ಟಿದ್ದಾರೆ.

Edited By : Vijay Kumar
PublicNext

PublicNext

29/11/2020 09:50 pm

Cinque Terre

122.84 K

Cinque Terre

61

ಸಂಬಂಧಿತ ಸುದ್ದಿ