ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅವಕಾಶವಾದಕ್ಕೆ ಇನ್ನೊಂದು ಹೆಸರೇ ಜೆಡಿಎಸ್

ಅರಸೀಕೆರೆ (ನ.25): ಅವಕಾಶವಾದಿ ರಾಜಕಾರಣಕ್ಕೆ ಮತ್ತೊಂದು ಹೆಸರೇ ಜೆಡಿಎಸ್‌ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. ತಾಲೂಕಿನ ಗಂಡಸಿ ಹೋಬಳಿ ಮಂಗಳಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಶಿರಾ ಹಾಗೂ ಆರ್‌.ಆರ್‌.ನಗರ ಉಪಚುನಾವಣೆಯಲ್ಲಿ ಜೆಡಿಎಸ್‌ ಗಳಿಸಿರುವ ಮತಗಳ ಪ್ರಮಾಣ ನೋಡಿದ್ರೆ ಎರಡು ಪಕ್ಷಗಳ ನಡುವೆ ಒಳ ಒಪ್ಪಂದ ನಡೆದಿದೆಯೇ? ಎಂಬ ಅನುಮಾನ ವ್ಯಕ್ತವಾಗುತ್ತದೆ ಎಂದರು.

ಈ ಹಿಂದೆ ಬಿಜೆಪಿ ಹಿಂದೆ ಹೋಗಿದ್ದ ಎಚ್‌.ಡಿ.ಕುಮಾರಸ್ವಾಮಿಗೆ ಈಗಲೂ ಆ ಪಕ್ಷದ ಬಗ್ಗೆ ಒಲವಿದೆ. ಈಗಲೂ ಅವರಿಗೆ ಆಡಳಿತ ಪಕ್ಷದ ಬಗ್ಗೆ ಒಲವಿದೆ. ಆದ್ದರಿಂದಲೇ ಅವರು ಆಡಳಿತ ಪಕ್ಷದ ಬಗ್ಗೆ ಮೃದು ಧಹೋರಣೆ ತಾಳುತ್ತಿದ್ದಾರೆ. ಅಧಿಕಾರಕ್ಕಾಗಿ ಯಾರೊಂದಿಗೆ ಬೇಕಾದರೂ ಹೋಗಲು ಜೆಡಿಎಸ್‌ ಸಿದ್ಧರಿರುವುದರಿಂದಲೇ ಜೆಡಿಎಸ್ ಅವಕಾಶವಾದಿ ಪಕ್ಷ ಎಂಬುದು ಸಾಬೀತಾಗಿದೆ ಎಂದು ಆರೋಪಿಸಿದರು.

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಎಚ್‌.ಡಿ.ಕುಮಾರಸ್ವಾಮಿಗೆ ನಾವು ನೋವು ನೀಡಿದ್ದೀವಿ ಎಂಬುದು ಸತ್ಯಕ್ಕೆ ದೂರವಾದ ಸಂಗತಿ. ನೋವುಂಡವರು ತಾಜ್‌ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡುತ್ತಾರೆಯೇ? ಸರ್ಕಾರ ಪತನವಾಗುತ್ತದೆ ಎಂದು ಗೊತ್ತಿದ್ದು, ಅಮೆರಿಕಾ ಪ್ರವಾಸ ಕೈಗೊಂಡಿದ್ದು ಎಷ್ಟು ಸರಿ? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

Edited By : Nagaraj Tulugeri
PublicNext

PublicNext

25/11/2020 11:58 am

Cinque Terre

97.7 K

Cinque Terre

6

ಸಂಬಂಧಿತ ಸುದ್ದಿ