ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟ್ರಂಪ್ ರಂಪಾಟ, ಛಲ ಬಿಡದ ಬೈಡೆನ್;ಪದಗ್ರಹಣಕ್ಕೆ ಗ್ರಹಣ

ವಾಷಿಂಗ್ಟನ್- ಅಮೆರಿಕ ಚುನಾವಣೆ ಮುಗಿದು 3ವಾರ ಮುಗೀತು. ಆದ್ರೆ ಮಾಜಿ ಅಧ್ಯಕ್ಷ ಟ್ರಂಪ್ ರಂಪಾಟ ಮಾತ್ರ ಇನ್ನೂ ಮುಗಿದಿಲ್ಲ. ಆಗಿನಿಂದ ಈಗಿನವರೆಗೂ ಟ್ರಂಪ್ ತಗಾದೆ ತಗೆಯುತ್ತಲೇ ಇದ್ದಾರೆ. ಈಗಲೂ ಅವರಿಗೆ ಬೈಡನ್ ಗೆಲುವಿನ ಬಗ್ಗೆ ಅನುಮಾನ ಇದೆಯಂತೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿದ ಟ್ರಂಪ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ನೂತನ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ಅಧಿಕಾರ ಹಸ್ತಾಂತರಕ್ಕೆ ಟ್ರಂಪ್ ಸಹಕರಿಸುತ್ತಿಲ್ಲ.

ಜನವರಿ 20ರಂದು ಮದ್ಯಾಹ್ನ 12ಕ್ಕೆ ಸಾರ್ವಜನಿಕರ ಸಮ್ಮುಖದಲ್ಲಿ ಅಧಿಕಾರ ಹಸ್ತಾಂತರ ಆಗಬೇಕಿದೆ. ಈ ಕಾರ್ಯಕ್ರಮದಲ್ಲಿ ಹೊಸ ಅಧ್ಯಕ್ಷರು ಜನರನ್ನುದ್ದೇಶಿಸಿ ಮಾತನಾಡುತ್ತಾರೆ. ಇದು 200 ವರ್ಷಗಳಿಂದ ಅಮೆರಿಕದಲ್ಲಿ ನಡೆದುಕೊಂಡು ಬಂದ ಸಂಪ್ರದಾಯ. ಆದ್ರೆ ಈ ಬಾರಿಯ ಪದಗ್ರಹಣ ಕಾರ್ಯಕ್ರಮಕ್ಕೆ ಟ್ರಂಪ್ ಹಾಜರಾಗ್ತಾರೋ ಇಲ್ಲವೋ ಎಂಬ ಅನುಮಾನ ಶುರುವಾಗಿದೆ.

ಸೋತ ಹಿಂದಿನ ಅಧ್ಯಕ್ಷರು ಮುಂದಿನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡಬೇಕು. ಒಂದು ವೇಳೆ ಟ್ರಂಪ್ ಅವರು ಬೈಡನ್ ಗೆ ಅಧಿಕಾರ ಹಸ್ತಾಂತರ ಮಾಡದಿದ್ರೆ ಮುಂದೆ ಪರ್ಯಾಯವಾಗಿ ಏನು ಮಾಡಬೇಕು ಎಂಬ ಮಾರ್ಗಸೂಚಿ ಅಮೆರಿಕ ಸಂವಿಧಾನದಲ್ಲಿ ಇಲ್ಲವೇ ಇಲ್ಲ.

ಅಮೆರಿಕ ನಿಯಮಗಳ ಪ್ರಕಾರ ಎಲ್ಲ ರಾಜ್ಯಗಳು ಆಯಾ ರಾಜ್ಯಗಳ ಚುನಾವಣೆಯ ಫಲಿತಾಂಶಗಳನ್ನು ಡಿಸೆಂಬರ್ 8ರೊಳಗೆ ಪ್ರಮಾಣೀಕರಿಸಬೇಕು. ಆದರೆ ರಿಪಬ್ಲಿಕನ್ ಪಕ್ಷ ಅಧಿಕಾರದಲ್ಲಿರುವ ಸ್ವಿಂಗ್ ರಾಜ್ಯಗಳಿಗೆ ಡೊನಾಲ್ಡ್ ಟ್ರಂಪ್ ಅವರು ಫಲಿತಾಂಶ ಪ್ರಮಾಣೀಕರಿಸಬೇಡಿ ಎಂದು ತಮ್ಮ ಪ್ರಭಾವ ಹೇರಿದ್ದಾರೆ ಎನ್ನಲಾಗಿದೆ.

Edited By : Nagaraj Tulugeri
PublicNext

PublicNext

24/11/2020 03:39 pm

Cinque Terre

47.55 K

Cinque Terre

2

ಸಂಬಂಧಿತ ಸುದ್ದಿ