ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಚಿವ ಸ್ಥಾನ ಕೊಡಿಸಲೆಂದೇ ರಮೇಶ್ ಜಾರಕಿಹೊಳಿ ದೆಹಲಿಗೆ ಹೋಗಿರಬಹುದು

ಬೆಳಗಾವಿ- ತಮ್ಮ ಆಪ್ತರಿಗೆ ಸಚಿವ ಸ್ಥಾನ ಕೊಡಿಸಲು ಸಚಿವ ರಮೇಶ್ ಜಾರಕಿಹೊಳಿ ದೆಹಲಿಗೆ ಹೋಗಿರಬಹುದು. ಇದರಲ್ಲಿ ತಪ್ಪೇನಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.‌

ಬೆಳಗಾವಿ ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಎಲ್ಲ ಸಚಿವರೂ ಕ್ರಿಯಾಶೀಲವಾಗಿರಬೇಕು‌. ತಾವು ಹಾಕಿಕೊಂಡ ಯೋಜನೆಗಳ ಬಗ್ಗೆ ನಾಯಕರಿಗೆ ಮನವರಿಕೆ ಮಾಡಲು ದೆಹಲಿಗೂ ಹೋಗಬೇಕು. ತಮ್ಮೊಂದಿಗೆ ಬಂದವರ ಹಿತ ಕಾಯಲು ಅವರು ಮುಂದಾಗಿದ್ದರೆ ಅದರಲ್ಲಿ ಯಾವುದೇ ತಪಿಲ್ಲ ಎಂದರು‌.

ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ. ಸದ್ಯದರಲ್ಲೇ ಸಚಿವ ಸಂಪುಟ ವಿಸ್ತರಣೆ ಮಾಡೋದಾಗಿ ಯಡಿಯೂರಪ್ಪ ಹೇಳಿದ್ದಾರೆ. ಈ ವಿಷಯವಾಗಿ ಗೊಂದಲ ಇಲ್ಲ. ವದಂತಿಗಳಿಗೆ ಕಿವಿಗೊಡುವ ಅವಶ್ಯಕತೆ ಇಲ್ಲ ಎಂದು ಅಶ್ವತ್ಥನಾರಾಯಣ ಇದೇ ಸಂದರ್ಭದಲ್ಲಿ ಹೇಳಿದರು.

Edited By : Nagaraj Tulugeri
PublicNext

PublicNext

24/11/2020 10:36 am

Cinque Terre

62.74 K

Cinque Terre

0

ಸಂಬಂಧಿತ ಸುದ್ದಿ