ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ತಂದೆ ಚೆಕ್, ಮಗ ಆರ್‌ಟಿಜಿಎಸ್‌ನಿಂದ ಲಂಚ ಪಡೆದಿದ್ದಾರೆ'

ರಾಯಚೂರು: ಈ ಹಿಂದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚೆಕ್ ಮೂಲಕ ಲಂಚ ಪಡೆದರೆ, ಅವರ ಮಗ ಬಿ.ವೈ.ವಿಜಯೇಂದ್ರ ಈಗ ಆರ್‌ಟಿಜಿಎಸ್ ಮೂಲಕವೇ ಲಂಚ ಪಡೆದಿದ್ದಾರೆ ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.

ಮಸ್ಕಿಯಲ್ಲಿ ನಡೆದ ಕಾಂಗ್ರೆಸ್ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪ ಅವರು ಕೋವಿಡ್ ಸಾಮಗ್ರಿ ಖರೀದಿಯಲ್ಲಿ ಎರಡು ಸಾವಿರ ಕೋಟಿ ರೂ. ಲಂಚ ಪಡೆದಿದ್ದಾರೆ. ಅವರನ್ನು ಮನುಷ್ಯರು ಎನ್ನಬೇಕೋ? ಅಥವಾ ರಾಕ್ಷಸರು ಎನ್ನಬೇಕೋ? ಇವರೆಲ್ಲ ಮನುಷ್ಯತ್ವ ಇಲ್ಲದವರು ಎಂದು ಕಿಡಿಕಾರಿದರು.

ದೇಶದಲ್ಲಿ ಅತಿ ಹೆಚ್ಚು ಸುಳ್ಳು ಹೇಳಿದ ಪ್ರಧಾನಿ ಎಂದರೆ ನರೇಂದ್ರ ಮೋದಿ. ಕೊರೊನಾ ನಿಯಂತ್ರಣಕ್ಕೆ ಔಷಧ ಕಂಡು ಹಿಡಿಯುವುದು ಬಿಟ್ಟು ದೀಪ ಹಚ್ಚಿ ಗಂಟೆ ಬಾರಿಸಿದರೆ ಸೋಂಕು ಹೋಗುತ್ತಾ ಎಂದು ಕುಟುಕಿದರು.

Edited By : Vijay Kumar
PublicNext

PublicNext

23/11/2020 06:50 pm

Cinque Terre

96.99 K

Cinque Terre

9

ಸಂಬಂಧಿತ ಸುದ್ದಿ