ಮುಂಬೈ: ಮುಂದೊಂದು ದಿನ ಪಾಕಿಸ್ತಾನದ ಕರಾಚಿ ಭಾರತದ ಭಾಗವಾಗಲಿದೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಮುಂಬೈನ ಬಾಂದ್ರಾ ಪ್ರದೇಶದಲ್ಲಿರುವ ಕರಾಚಿ ಸ್ವೀಟ್ಸ್ ಹೆಸರನ್ನು ಬದಲಾಯಿಸುವಂತೆ ಶಿವಸೇನೆ ನಾಯಕ ನಿತಿನ್ ನಂದಗಾಂವ್ಕರ್ ಬೇಕರಿ ಮಾಲೀಕನಿಗೆ ಒತ್ತಾಯಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬೆನ್ನಲ್ಲೇ ಅಂಗಡಿಯ ಮಾಲೀಕ ಕರಾಚಿ ಹೆಸರನ್ನು ಸುದ್ದಿಪತ್ರಿಕೆಗಳಿಂದ ಮುಚ್ಚಿ ಕೇವಲ ಸ್ವೀಟ್ಸ್ ಹೆಸರನ್ನು ಮಾತ್ರ ಉಳಿಸಿಕೊಂಡಿದ್ದರು.
ಇದೇ ವಿಚಾರವಾಗಿ ಮಾತನಾಡಿರುವ ಫಡ್ನವೀಸ್ ಅವರು, "ಸ್ವೀಟ್ ಅಂಗಡಿಯ ಮಾಲೀಕರು ಅಖಂಡ ಭಾರತವನ್ನು ನಂಬುತ್ತಾರೆ. ಕರಾಚಿ ಒಂದು ದಿನ ಭಾರತದ ಭಾಗವಾಗಲಿದೆ ಎಂದು ನಾವು ನಂಬುತ್ತೇವೆ" ಎಂದು ಹೇಳಿದರು.
PublicNext
23/11/2020 02:51 pm