ಮರಾಠಾ ಸಮಾಜ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ರೋಲ್ ಕಾಲ್ ಹೋರಾಟಗಾರರು ನೀಡಿದ ಕರ್ನಾಟಕ ಬಂದ್ ಗೆ ಸಿಎಂ ಭಯ ಬೇಕಾಗಿಲ್ಲ, ವಿಜಯಪುರವನ್ನು ಯಾರು ಬಂದ್ ಮಾಡ್ತಾರೋ ನೋಡೋಣ ಎಂದು ಶಾಸಕ ಬಸನಗೌಡ ಪಾಟೀಲ್, ಹೇಳಿಕೆಯ ಬಗ್ಗೆ ಆಕ್ರೋಶವಾದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಯತ್ನಾಳಗೆ ಎರೆಡು ಸವಾಲೆದಿಸಿದ್ದಾರೆ.
ತಮ್ಮ ಫೇಸ್ಬುಕ್ ಖಾತೆಯಲ್ಲಿ ಅವರು 'ಶಾಸಕ ಬಸವನಗೌಡ ಯತ್ನಾಳ್ ಕನ್ನಡಪರ ಚಳುವಳಿಗಾರರ ಕುರಿತ ಕುಚೇಷ್ಟೇ ಮಾತನ್ನಾಡಿದ್ದು, ಅವರಾಗಿರುವ ಎಲ್ಲ ಮಾತುಗಳು ಅವರಿಗೇ ಅನ್ವಯಿಸುತ್ತದೆ. ಸಚಿವ ಸ್ಥಾನಕ್ಕಾಗಿ ತಮ್ಮ ಪಕ್ಷದವರನ್ನೇ ಬ್ಲಾಕ್ ಮೇಲ್ ಮಾಡಿರುವ ಯತ್ನಾಳ್. ಕಂಡ ಕಂಡವರಿಗೆ ಸವಾಲು ಹಾಕುವ ಬದಲು ನನ್ನ ಸವಾಲು ಸ್ವೀಕರಿಸಿ, ಇಲ್ಲವೆ ರಾಜಕೀಯ ಬಿಡಿ ಎಂದಿದ್ದಾರೆ.
ಮೊದಲನೇ ಸವಾಲಾಗಿ ಯತ್ನಾಳ್ ಶಾಸಕರಾಗಿರುವ ಜಿಲ್ಲೆ ನೆರೆ ಪರಿಸ್ಥಿತಿಗೆ ಸಿಕ್ಕು 25.000 ಕೋಟಿ ನಷ್ಟವಾಗಿದ್ದು, ಕೇಂದ್ರಕ್ಕೆ ಬಿಎಸ್ಶೈ 10.000 ಕೋಟಿ ಬೇಡಿಕೆ ಸಲ್ಲಿಸಿದ್ದು, 550 ಕೋಟಿ ಮಾತ್ರ ನೀಡಿದೆ. ಯತ್ನಾಳ್ ಗೆ ಕ್ಷೇತ್ರದ ಜನ ಹಿತ ಮುಖ್ಯವಾಗಿದ್ದರೇ ಕೇಂದ್ರವನ್ನು ಹಣ ಬಿಡುಗಡೆ ಮಾಡುವಂತೆ ಪ್ರಶ್ನಿಸಲಿ ಎಂದಿದ್ದಾರೆ.
ಎರಡನೇ ಸವಾಲು, ಜಿಎಸ್,ಟಿ ಜಾರಿಯಾದ ಬಳಿಕ ಕರ್ನಾಟಕ ಸರ್ಕಾರ ಲಕ್ಷಾಂತರ ಕೋಟಿ ರೂಪಾಯಿ ಹಣ ಕೇಂದ್ರಕ್ಕೆ ನೀಡಿದೆ. ಈಗಾಗಲೇ ರಾಜ್ಯಕ್ಕೆ ಜಿಎಸ್'ಟಿ ಪರಿಣಾಮ ರಾಜ್ಯಕ್ಕೆ ಬೀಳುವ ಹೊರಗೆ ಕೇಂದ್ರ ನಷ್ಟದ ಹಣ ನೀಡುವ ಭರವಸೆ ಈಡೇರಿಲ್ಲ, ಈ ಬಗ್ಗೆ ಮೌನ ತಾಳಿರುವ ಕೇಂದ್ರದ ವಿರುದ್ಧ ಧರಣಿ ಮಾಡಿ ಎಂದಿದ್ದಾರೆ.
ಇದೆರೆಡು ನಿಮ್ಮಿಂದಾದರೇ ಮಾಡಿ ಇಲ್ಲಾವಾದಲ್ಲಿ ಹೈ ಕಮಾಂಡ್ ಗುಲಾಮಗಿರಿಯನ್ನೇ ಮಾಡುತ್ತೇವೆ. ಗುಲಾಮಗಿರಿ ಬಿಟ್ಟು ಬೇರೆ ಗೊತ್ತಿಲ್ಲ ಎಂದು ಒಪ್ಪಿಕೊಳ್ಳಲಿ ಎಂದು ಸವಾಲು ಹಾಕಿದ್ದಾರೆ.
PublicNext
21/11/2020 01:42 pm