ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕ್ರೈಸ್ತ ನಿಗಮ ಸ್ಥಾಪಿಸಿ; ಇಲ್ಲದಿದ್ರೆ ಕ್ರೈಸ್ತರೆಲ್ಲ ಹೋರಾಟ ಮಾಡ್ತೀವಿ

ಮಂಗಳೂರು- ಕ್ರೈಸ್ತರಲ್ಲೂ ಬಡವರಿದ್ದಾರೆ. ಅವರ ಅಭಿವೃದ್ಧಿಯೂ ಆಗಬೇಕಿದೆ. ಹಿಂದೆ ಬಿಷಪ್ ಅವರಿಂದ ಸನ್ಮಾನ ಸ್ವೀಕರಿಸಿದ್ದ ಮುಖ್ಯಮಂತ್ರಿಗಳು ಸನ್ಮಾನ ಸ್ವೀಕರಿಸಿ ಕ್ರೈಸ್ತ ಅಭಿವೃದ್ಧಿ ನಿಗಮಕ್ಕೆ ಅನುಮೋದನೆ ಕೊಡೋದಾಗಿ ಹೇಳಿದ್ದರು. ಆನಂತರ ಯಾಕಾಗಿ ರದ್ದು ಮಾಡಿದರು? ಎಂದು ಕೆಪಿಸಿಸಿ ವಕ್ತಾರ ಐವಾನ್ ಡಿಸೋಝಾ ಪ್ರಶ್ನೆ‌ ಮಾಡಿದ್ದಾರೆ.

ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಐವಾನ್ ಡಿಸೋಝಾ ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆಗೆ ನಮ್ಮ ಒತ್ತಾಯ ಇತ್ತು‌. ಆದರೆ ಸರ್ಕಾರ ನಮ್ಮ ಮನವಿಗೆ ಸರಿಯಾಗಿ ಸ್ಪಂದಿಸಿಲ್ಲ‌. ಇದರ ವಿರುದ್ಧ ರಾಜ್ಯದ ಕ್ರೈಸ್ತರನ್ನು ಹೋರಾಟಕ್ಕೆ ಧುಮುಕುವಂತೆ ಮಾಡ್ತೇವೆ. ಜನರು ಬೀದಿಗೆ ಬಂದರೆ ಸರ್ಕಾರವೇ ನೇರ ಹೊಣೆ. ಹೀಗಾಗಿ ಕ್ರೈಸ್ತರನ್ನು ಯಾವತ್ತೂ ಹಗುರವಾಗಿ ಪರಿಗಣಿಸಬೇಡಿ ಎಂದಿದ್ದಾರೆ.

ಕ್ರೈಸ್ತ ಸಮುದಾಯದವರು ಮೌನವಾಗಿದ್ದಾರೆಂದರೆ ಅದು ಅವರ ವೀಕ್ನೆಸ್ ಅಲ್ಲ. ಮುಖ್ಯಮಂತ್ರಿಗಳು ಕ್ರೈಸ್ತರನ್ನು ಮಂಗಗಳು ಎಂದು ತಿಳಿದಿದ್ದಾರಾ? ಎಂದು ಐವಾನ್ ಡಿಸೋಝಾ ಪ್ರಶ್ನೆ ಮಾಡಿದ್ದಾರೆ.

Edited By : Nagaraj Tulugeri
PublicNext

PublicNext

18/11/2020 03:37 pm

Cinque Terre

49.12 K

Cinque Terre

9

ಸಂಬಂಧಿತ ಸುದ್ದಿ