ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೇಟೆ ರೌಡಿಗಳಿಗೆ ನಾನು ರಿಯಾಕ್ಷನ್ ಕೊಡಲ್ಲ: ಪ್ರತಾಪ್ ಗೆ ಸುಮಲತಾ ಟಾಂಗ್

ಬೆಂಗಳೂರು- ಮಂಡ್ಯ ಸಂಸದೆ ಸುಮಲತಾ ಅವರು ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ. ಸುಮಲತಾ ತಮ್ಮ ಕ್ಷೇತ್ರದಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸುಮಲತಾ ಚುನಾವಣೆ ಸಮಯದಿಂದಲೂ ಇಂತಹ ಮಾತುಗಳನ್ನು ಕೇಳುತ್ತಲೇ ಬಂದಿದ್ದೇನೆ. ಅಂಬರೀಷ್ ಇರುವಾಗ ಯಾರಿಗೂ ಈ ರೀತಿ ಮಾತಾಡಲು ಧೈರ್ಯ ಇರಲಿಲ್ಲ. ಈಗ ಎಲ್ಲರೂ ಮಾತಾಡ್ತಿದ್ದಾರೆ. ಇರಲಿ ನಾನು ನನ್ನ ಮತದಾರರಿಗಷ್ಟೇ ಉತ್ತರದಾಯಿ ಆಗಿದ್ದೇನೆ ಹೊರತು ಪ್ರತಾಪ್ ಗೆ ಅಲ್ಲ.

ಅವರು ಟೀಕಿಸುವಾಗ ಸಂಸದರ ಭಾಷೆ ಬಳಸಿದ್ದರೆ ನಾನು ಪ್ರತಿಕ್ರಿಯೆ ನೀಡಬಹುದಿತ್ತು. ಒಬ್ಬ ಪೇಟೆ ರೌಡಿಯಂತೆ ಮಾತಾಡಿದರೆ ನನ್ನ ರಿಯಾಕ್ಷನ್ ಗೆ ಅವರು ಅರ್ಹರಲ್ಲ ಎಂದು ಸುಮಲತಾ ಪ್ರತಾಪ್ ಸಿಂಹಗೆ ಟಾಂಗ್ ಕೊಟ್ಟಿದ್ದಾರೆ.

Edited By : Nagaraj Tulugeri
PublicNext

PublicNext

16/11/2020 07:42 pm

Cinque Terre

133.49 K

Cinque Terre

15

ಸಂಬಂಧಿತ ಸುದ್ದಿ