ಮೈಸೂರು- ಹೊರಗಿಂದ ಬಂದ ಆ 17 ಮಂದಿ ಪಕ್ಷಕ್ಕಾಗಿ ದುಡಿದವರಲ್ಲ. ಪಕ್ಷ ಕಟ್ಟಿದವರಲ್ಲ. ಆದ್ರೆ ಪಕ್ಷ ಅಧಿಕಾರಕ್ಕೆ ಬರಲು ಸಹಕಾರ ನೀಡಿದ್ದಾರಷ್ಟೇ. ಅವರಯ ಬರುವ ಮುನ್ನ ನಮ್ಮಲ್ಲಿ 105 ಜನ ಶಾಸಕರು ಇದ್ದರು ಎಂಬುದನ್ನು ಮೆರಯಲಾಗದು. ಎಂದು ಕೇದ್ರ ಸಚಿವ ಡಿ.ವಿ ಸದಾನಂದಗೌಡ ಹೇಳಿದ್ದಾರೆ.
ಸಂಪುಟ ವಿಸ್ತರಣೆ ವೇಳೆ ಎಲ್ಲ ಪಕ್ಷಾಂತರಿಗಳಿಗೆ ಸಚಿವ ಸ್ಥಾನ ಸಿಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸದಾನಂದಗೌಡ ಬೇರೆ ಪಕ್ಷದಿಂದ ಬಂದವರಿಗೆ ಈಗಾಗಲೇ ಏನು ಕೊಡಬೇಕೋ ಅದನ್ನು ಕೊಟ್ಟಿದ್ದೇವೆ. ಮೂಲ ಬಿಜೆಪಿಗರಿಗೂ ಸ್ಥಾನ ಕೊಡಬೇಕಲ್ವಾ? ಎಂದು ಪ್ರಶ್ನೆ ಮಾಡಿದರು.
ಈಗ ಬಂದವರನ್ನಷ್ಟೇ ಎಲ್ಲರೂ ಪರಿಗಣಿಸುತ್ತಿದ್ದಾರೆ. ಆ 17 ಮಂದಿ ಎಲ್ಲರಿಗೂ ದೊಡ್ಡವರಾಗಿ ಕಾಣುತ್ತಿದ್ದಾರೆ. ಆದ್ರೆ ನಾವು ಮೂಲ ಬಿಜೆಪಿಗರಿಗೆ ಮೊದಲ ಪ್ರಾಶಸ್ತ್ಯ ಕೊಡಬೇಕಿದೆ. ನಮ್ಮ ಪಕ್ಷದ ಎಲ್ಲ ಶಾಸಕರು ಮಂತ್ರಿಯಾಗುವ ಅರ್ಹತೆ ಹೊಂದಿದ್ದಾರೆ. ಆದ್ರೆ ಯಾರಿಗೆ ಯಾವ ಸ್ಥಾನ ಸಿಗಬೇಕು ಅನ್ನೋದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದರು.
PublicNext
14/11/2020 03:23 pm