ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯ ಉಸ್ತುವಾರಿಗಳ ಹೊಸ ತಂಡ ನೇಮಕ: 3 ರಾಜ್ಯಗಳ ಹೊಣೆ ಹೊತ್ತ ಅರುಣ್ ಸಿಂಗ್, ಸಿಟಿ ರವಿ

ನವದೆಹಲಿ: ಬೈ ಎಲೆಕ್ಷನ್ ಬಳಿಕ ಬಿಜೆಪಿ ಪಕ್ಷವನ್ನು ಮತ್ತಷ್ಟು ಬಲಗೊಳಿಸಲು ಮುಂದಾಗಿರುವ ಹೈ ಕಮಾಂಡ್ ರಾಜ್ಯಗಳ ಉಸ್ತುವಾರಿಯ ಹೊಸ ತಂಡವನ್ನು ಘೋಷಿಸಿದೆ.

ಕರ್ನಾಟಕ ರಾಜ್ಯದ ಉಸ್ತುವಾರಿಯಾಗಿ ಅರುಣ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ. ಉಪ ಉಸ್ತುವಾರಿಯಾಗಿ ಡಿಕೆ ಅರುಣಾ ಅವರನ್ನು ನೇಮಿಸಲಾಗಿದೆ.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಪಕ್ಷದ ರಾಜ್ಯ ಮುಖಂಡ ಸಿ.ಟಿ. ರವಿ ಅವರಿಗೆ ತಮಿಳುನಾಡು, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಉಸ್ತುವಾರಿ ವಹಿಸಲಾಗಿದೆ.

ರಾಜ್ಯದ ಇನ್ನೊಬ್ಬ ಮುಖಂಡ ನಿರ್ಮಲಕುಮಾರ್ ಸುರಾನಾ ಅವರನ್ನು ನೆರೆಯ ಪುದುಚೇರಿಗೆ ನಿಯೋಜಿಸಲಾಗಿದೆ.

ಇದುವರೆಗೆ ರಾಜ್ಯದ ಉಸ್ತುವಾರಿಯಾಗಿದ್ದ ಪಿ.ಮುರುಳೀಧರ ರಾವ್ ಅವರಿಗೆ ಮಧ್ಯಪ್ರದೇಶದ ಹೊಣೆ ವಹಿಸಲಾಗಿದೆ.

Edited By : Nirmala Aralikatti
PublicNext

PublicNext

14/11/2020 12:59 pm

Cinque Terre

55.38 K

Cinque Terre

0

ಸಂಬಂಧಿತ ಸುದ್ದಿ