ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

CM ಬಿಎಸ್ ವೈರನ್ನು ಮರು ಭೇಟಿಯಾದ HDK

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರ ಇತ್ತೀಚಿನ ನಡೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಇತ್ತೀಚಿನ 2 ವಿಧಾನಸಭಾ ಉಪಚುನಾವಣೆಗಳಲ್ಲಿ ಸೋತು ಸುಣ್ಣವಾಗಿರುವ ಹೆಚ್ ಡಿಕೆ ನಡೆ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗುತ್ತಿದೆ.

ಆರ್ ಆರ್ ನಗರ ಮತ್ತು ಶಿರಾ ಕ್ಷೇತ್ರದಲ್ಲಿ ಸೋಲಿನ ಹತಾಷೆಯ ಭಾವ ಅವರಿಗೆ ಭಿನ್ನವಾಗಿ ಯೋಚಿಸುವಂತೆ ಮಾಡುತ್ತಿದೆಯೇ? ಅಂಥದೊಂದು ಅನುಮಾನ ಹುಟ್ಟುವುದಕ್ಕೆ ಕಾರಣವಿದೆ.

ಕುಮಾರಸ್ವಾಮಿ ಅವರು ಇಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರನ್ನು ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿ ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆಸಿದರು.

ಅವರ ಭೇಟಿ ರಾಜಕೀಯ ವಲಯಗಳಲ್ಲಿ ವಿಪರೀತ ಕುತೂಹಲ ಹುಟ್ಟಿಸಿದೆ.

ಮೊನ್ನೆಯವರೆಗೂ ಯಡಿಯೂರಪ್ಪನವರ ಆಡಳಿತ ವೈಖರಿಯನ್ನು ಟೀಕಿಸುತ್ತಿದ್ದ ಹೆಚ್ ಡಿಕೆಯವರು ಒಂದರೆಡು ತಿಂಗಳುಗಳಿಂದ ಮೃದು ಧೋರಣೆ ತಳೆದಿರುವುದು ಕೌತುಕತೆ ಮೂಡಿಸಿದೆ.

ಕೇವಲ ಒಂದು ತಿಂಗಳು ಹಿಂದೆಯಷ್ಟೇ ಕುಮಾರಸ್ವಾಮಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದರು.

Edited By : Nirmala Aralikatti
PublicNext

PublicNext

14/11/2020 08:10 am

Cinque Terre

53.82 K

Cinque Terre

2

ಸಂಬಂಧಿತ ಸುದ್ದಿ