ನವದೆಹಲಿ: ಮನೆ ಖರೀದಿಸುವವರಿಗೆ ಕೇಂದ್ರ ಸರ್ಕಾವು ಸಿಹಿ ಸುದ್ದಿ ನೀಡಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆತ್ಮನಿರ್ಭರ 3.0 ಸೇರಿದಂತೆ ಹಲವು ಪ್ರೋತ್ಸಾಹಕ ಯೋಜನೆಗಳನ್ನು ಪ್ರಕಟಿಸಿದೆ.
ಸರ್ಕಲ್ ರೇಟ್ ಹಾಗೂ ಎಗ್ರಿಮೆಂಟ್ ವ್ಯಾಲ್ಯೂ ನಡುವೆ ಅಂತರವಿರುತ್ತದೆ. ಹೀಗಾಗಿ ಸರ್ಕಲ್ ರೇಟ್ ಅನ್ನು ಶೇ.20ರಷ್ಟು ಹೆಚ್ಚಿಸಲಾಗುವುದು. ಶೇ. 10ರಷ್ಟು ಸರ್ಕಲ್ ರೇಟ್ ಸದ್ಯ ಆದಾಯ ತೆರಿಗೆ ಕಾಯಿದೆಯಲ್ಲಿ ಸ್ಥಿರವಾಗಿದ್ದು, ಕಾಯಿದೆಯ 45 ಕಲಾಂಗೆ ತಿದ್ದುಪಡಿ ತರಲಾಗುವುದು. ಶೇಕಡಾ 10 ರಿಂದ ಶೇ. 20ಕ್ಕೆ ಏರಿಕೆ ಮಾಡುತ್ತೇವೆ. ಇದರಿಂದ ಜಾಸ್ತಿ ಮನೆ ಖರೀದಿಯಾಗಲಿದೆ. ಇದು ಕೇವಲ ಎರಡು ಕೋಟಿ ರೂಪಾಯಿ ಒಳಗಿನ ಮನೆಗಳಿಗೆ ಮಾತ್ರ ಅನ್ವಯವಾಗುತ್ತದೆ. ಅಲ್ಲದೆ ಮೊದಲ ಖರೀದಿದಾರರಿಗೆ ಮಾತ್ರ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.
ಮುಂದಿನ ವರ್ಷ ಜೂನ್‌ವರೆಗೆ ಈ ಯೋಜನೆಯ ಲಾಭಾಂಶ ಪಡೆಯಬಹುದಾಗಿದೆ. ಸರ್ಕಲ್ ರೇಟ್ ಹೆಚ್ಚಾದರೆ ಮನೆಗಳ ಬೆಲೆಯಲ್ಲಿ ಇಳಿಕೆಯಾಗಲಿದೆ. ಇದರ ಲಾಭ ನೇರವಾಗಿ ಗ್ರಾಹಕನ ಕೈ ಸೇರಲಿದೆ ಎಂದು ಮಾಹಿತಿ ನೀಡಿದ್ದಾರೆ.
PublicNext
12/11/2020 06:08 pm