ಬೆಂಗಳೂರು- ಕೆ. ಆರ್ ಪೇಟೆ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳಲ್ಲಿ ಅಷ್ಟಾಗಿ ಲಿಂಗಾಯತ ಮತಗಳು ಬಹುಸಂಖ್ಯೆಯಲ್ಲಿಲ್ಲ. ಆದರೂ ಅಲ್ಲಿ ಪ್ರಚಾರ ಮಾಡಿದ್ದ ಸಿಎಂ ಯಡಿಯೂರಪ್ಪ ಪುತ್ರ ಬಿ ವೈ ವಿಜಯೇಂದ್ರ ತಮ್ಮ ಅಭ್ಯರ್ಥಿಗಳ ಗೆಲುವಿಗೆ ಕಾರಣಾಗಿದ್ದಾರೆ.
ಲಿಂಗಾಯತೇತರ ನಾಯಕರಾಗಿಯೂ ವಿಜಯೇಂದ್ರ ಹೊರಹೊಮ್ಮಿದ್ದಾರೆ ಎಂಬ ಮಾತು ಬಿಜೆಪಿ ವಲಯದಲ್ಲಿದೆ. ಲಿಂಗಾಯತ ಮತಗಳು ಹೆಚ್ಚಾಗಿರುವ ಕ್ಷೇತ್ರಗಳಲ್ಲಿ ಯಡಿಯೂರಪ್ಪ ಅವರ ಜನಪ್ರಿಯತೆ ಮೇರೆಗೆ ಗೆದ್ದು ಬರುವುದು ಅಷ್ಟೇನೂ ವಿಶೇಷವಲ್ಲ.
ಶಿರಾ ಕ್ಷೇತ್ರದಲ್ಲಿ ಲಿಂಗಾಯತ ಮತಗಳು 3 ಸಾವಿರ ಮೀರೋದಿಲ್ಲ. ಮತ್ತು ರಾಜಕೀಯ ವರ್ಚಸ್ಸು ಕೂಡ ಇಲ್ಲ. ಆದರೂ ಅಲ್ಲಿ ಬಿಜೆಪಿ ಗೆದ್ದಿದೆ. ಕೆ ಆರ್ ಪೇಟೆಯಲ್ಲಿ ಬಿಜೆಪಿಯ ವರ್ಚಸ್ಸು ಇಲ್ಲ. ರಾಜಕೀಯ ಹಿಡಿತವೂ ಇಲ್ಲ. ಅಲ್ಲಿಯೂ ಬಿಜೆಪಿ ಗೆಲುವು ಸಾಧಿಸಿದೆ. ಇದಕ್ಕೆಲ್ಲ ಕಾರಣ ಬಿ ವೈ ವಿಜಯೇಂದ್ರ ಹಾಗೂ ಕಾರ್ಯಕರ್ತರು ಕಾರಣ. ಈ ಎಲ್ಲ ಹಿನ್ನಲೆಯಲ್ಲಿ ವಿಜಯೇಂದ್ರ ಅವರ ವರ್ಚಸ್ಸು ಪಕ್ಷದಲ್ಲಿ ಹೆಚ್ಚಾಗಿದೆ.
PublicNext
12/11/2020 09:09 am