ತುಮಕೂರು: ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಗೆಲುವು ದಾಖಲಿಸುವ ಮೂಲಕ ಬಿಜೆಪಿ ಇತಿಹಾಸ ಸೃಷ್ಟಿಸಿದೆ. ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಅವರು ಕಾಂಗ್ರೆಸ್‌ನ ಹಿರಿಯ ನಾಯಕ ಟಿಬಿ ಜಯಚಂದ್ರ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ್ದಾರೆ.
ರಾಜೇಶ್‌ಗೌಡ ಅವರು ಆರಂಭದಿಂದಲೂ ಮುನ್ನಡೆಯಲ್ಲಿದ್ದರು. ಆದರೆ 13ನೇ ಸುತ್ತಿನಲ್ಲಿ 8,471 ಮತಗಳ ಅಂತರದಿಂದ ಮುನ್ನಡೆಯಲ್ಲಿದ್ದ ಅವರು 15ನೇ ಸುತ್ತಿನ ಮತ ಎಣಿಕೆಯ ವೇಳೆ 1,765 ಮತಗಳ ಅಂತರಕ್ಕೆ ಕುಸಿದರು. ಹೀಗಾಗಿ ಸ್ಪರ್ಧೆ ತೀವ್ರಗೊಂಡಿತ್ತು. ಬಳಿಕ ರಾಜೇಶ್ ಗೌಡ ಅಂತರವನ್ನು ಹೆಚ್ಚು ಅಂತರವನ್ನು ಹೆಚ್ಚಿಸಿಕೊಂಡು ಜಯಗಳಿಸಿದ್ದಾರೆ.
ವಿಶೇಷವೆಂದರೆ 2018ರ ಚುನಾವಣೆಯಲ್ಲಿ ಬಿಜೆಪಿ 16,959 ಮತಗಳನ್ನು ಪಡೆದಿತ್ತು. ಆದರೆ ಈ ಬಾರಿ 72,739 ಮತಗಳನ್ನು ಗಳಿಸಿದೆ. ಸಾರ್ವತ್ರಿಕ ಚುನಾವಣೆ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಸತ್ಯನಾರಾಯಣ ಅವರು 74,338 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ 63,973 ಮತಗಳನ್ನು ಪಡೆದಿತ್ತು.
PublicNext
10/11/2020 03:26 pm