ಲಂಡನ್- ರಾವಣನ ವಿರುದ್ಧ ರಾಮ ಹೋರಾಟ ಮಾಡಿದಂತೆ ಬ್ರಿಟೀಷ್ ಪ್ರಧಾನಿ ಬೋರಿಸ್ ಜಾನ್ಸನ್ ಕೂಡ ಹೋರಾಡ್ತಾರಂತೆ.
ಹೀಗೆಂದು ಸ್ವತಃ ಬೋರಿಸ್ ಜಾನ್ಸನ್ ಅವರೇ ಹೇಳಿದ್ದಾರೆ. ಬ್ರಿಟನ್ನಿನಲ್ಲಿ ಕೊರೊನಾ ಉಲ್ಬಣ ಹೆಚ್ಚಾಗುತ್ತಲೇ ಇದೆ. ಇನ್ನೂ ಕೂಡ ಅಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಅಲ್ಲಿರುವ ಭಾರತೀಯರಿಗಾಗಿ ಅವರು ಐ ಗ್ಲೋಬಲ್ ದಿವಾಳಿ ಫೆಸ್ಟ್ ಗೆ ಚಾಲನೆ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು ಬ್ರಿಟನ್ನಿನ ಭಾರತೀಯರಿಗೆ ಈ ಬಾರಿಯ ಹಬ್ಬಕ್ಕೆ ತಮ್ಮೂರಿಗೆ ತೆರಳಲು ಆಗುತ್ತಿಲ್ಲ. ಅವರ ತ್ಯಾಗವನ್ನು ಮೆಚ್ಚಿಕೊಂಡಿದ್ದೇನೆ. ಸಾಕಷ್ಟು ದೊಡ್ಡ ಸವಾಲುಗಳು ನಮ್ಮ ಮೇಲಿವೆ. ನಾವು ಉತ್ತಮ ಪ್ರಜ್ಞೆ ಮೂಲಕ ಈ ಸೋಂಕಿನ ವಿರುದ್ಧ ಜಯ ಸಾಧಿಸಲಿದ್ದೇವೆ ಎಂದಿದ್ದಾರೆ.
ಇದೇ ವೇಳೆ ಶ್ರೀರಾಮನನ್ನೂ ನೆನಪಿಸಿಕೊಂಡ ಬೋರಿಸ್ ಜಾನ್ಸನ್ ಕೊರೊನಾ ಎಂಬ ರಾವಣನನ್ನು ಸೋಲಿಸಲು ರಾಮನಂತೆ ಹೋರಾಟ ಮಾಡಬೇಕಿದೆ ಎಂದಿದ್ದಾರೆ.
PublicNext
07/11/2020 09:34 pm