ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೊಲೀಸರು ಏನೇ ಮಾಡಿದ್ರೂ ನಾವು ವಿನಯ್ ಕುಲಕರ್ಣಿ ಪರ

ಬೆಂಗಳೂರು-ವಿನಯ್ ಕುಲಕರ್ಣಿ ಪ್ರಭಾವಿ ರಾಜಕಾರಣಿ. ಹೀಗಾಗಿ ಅವರನ್ನು ಮಟ್ಟ ಹಾಕೋದಕ್ಕಾಗಿ ಸಿಬಿಐ ಅಸ್ತ್ರ ಬಳಸುತ್ತಿದ್ದಾರೆ. ನಮ್ಮವರು ಯಾರೂ ತಪ್ಪು ಮಾಡಿಲ್ಲ. ನಮ್ಮ ನಾಯಕರನ್ನು ಮುಗಿಸಲು ಬಿಜೆಪಿಯವರು ಈ ರೀತಿ ಮಾಡ್ತಿದ್ದಾರೆ ಎಂದು ಡಿ ಕೆ ಶಿವಕುಮಾರ್ ಆರೋಪಿಸಿದ್ದಾರೆ.‌

ಮಾಜಿ ಸಚಿವ ವಿನಯ್ ಕುಲಕರ್ಣಿಯನ್ನು ಸಿಬಿಐ ವಶಕ್ಕೆ ಪಡೆದ ಹಿನ್ನಲೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ಸಿಬಿಐ ನಡೆ ಬಗ್ಗೆ ಆಕ್ರೋಶಿತರಾಗಿದ್ದಾರೆ.

ವಿನಯ್ ಕುಲಕರ್ಣಿ ಮೇಲಿದ್ದ ಆರೋಪದ ಬಗ್ಗೆ ಪೊಲೀಸರು ತನಿಖೆ ಮಾಡಿದ್ದಾರೆ.‌ ರಿಪೋರ್ಟ್ ಕೂಡ ಮಾಡಿದ್ದಾರೆ. ಈ ಬಗ್ಗೆ ನಾನು ವಿನಯ್ ಕುಲಕರ್ಣಿ ಬಳಿ ಎಲ್ಲವನ್ನೂ ವಿಚಾರಿಸಿದ್ದೇನೆ. ಪ್ರಭಾವಿ ಎಂಬ ಕಾರಣಕ್ಕೆ ವಿನಯ್ ಕುಲಕರ್ಣಿ ಅವರನ್ನು ಮಟ್ಟ ಹಾಕುವ ಕೆಲಸವನ್ನು ಅಲ್ಲಿನ ಬಿಜೆಪಿ ನಾಯಕರು ಮಾಡ್ತಿದ್ದಾರೆ. ಬಿಜೆಪಿಯ ಸಚಿವರೊಬ್ಬರು ವಿನಯ್ ಕುಲಕರ್ಣಿಯವರನ್ನು ಕರೆದು ಬಿಜೆಪಿ ಸೇರಲು ಆಹ್ವಾನ ನೀಡಿದ್ದರು‌ ಎಂದು ಡಿಕೆ ಶಿವಕುಮಾರ್ ಆರೋಪಿಸಿದರು‌.

ಸಿಬಿಐನವರು ರಾಜಕೀಯ ಪ್ರಭಾವಕ್ಕೆ ತಲೆ ಬಾಗಬಾರದು. ವಿಚಾರಣೆ ನಡೆಯುತ್ತಿದೆ. ಸಿಬಿಐ ಅಧಿಕಾರಿಗಳು ಕಾನೂನು ಬಿಟ್ಟು ಏನನ್ನೂ ಮಾಡೋದಿಲ್ಲ ಎಂಬ ನಂಬಿಕೆ ಇದೆ. ಪೊಲೀಸರು ಏನೇ ಮಾಡಿದರೂ ನಾವು ವಿನಯ್ ಕುಲಕರ್ಣಿ ಪರವಾಗಿ ಇದ್ದೇವೆ ಎಂದರು.

Edited By : Nagaraj Tulugeri
PublicNext

PublicNext

05/11/2020 01:43 pm

Cinque Terre

84.67 K

Cinque Terre

20

ಸಂಬಂಧಿತ ಸುದ್ದಿ