ನವದೆಹಲಿ: ಕೇಂದ್ರದ ಮೂರು ಕೃಷಿ ಸುಧಾರಣಾ ಕಾಯಿದೆ ವಾಪಸ್ ಪಡೆಯುವಂತೆ ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ ಸೆಪ್ಟೆಂಬರ್ 27 ರಂದು 'ಭಾರತ್ ಬಂದ್'ಗೆ ಕರೆ ನೀಡಿದೆ.
ಲಖನೌದಲ್ಲಿ ನಡೆದ ಎರಡು ದಿನಗಳ ರೈತ ಸಂಘದ ಸಭೆಯ ನಂತರ ಈ ತೀರ್ಮಾನ ಮಾಡಲಾಗಿದೆ. ನಗರ ಪ್ರದೇಶಗಳಲ್ಲಿ ಭಾರತ್ ಬಂದ್ ಆಚರಿಸಲು ರೈತ ಮುಖಂಡರು ಮತ್ತು ವಿವಿಧ ಉದ್ಯೋಗಿಗಳ ಸಂಘಟನೆಗಳು ಮತ್ತು ಕಾರ್ಮಿಕ ಸಂಘಟನೆಗಳ ಸಂಪರ್ಕ ಸಾಧಿಸಲಿದ್ದಾರೆ. ಪ್ರತಿಭಟನಾ ಸಮಯದಲ್ಲಿ ರೈತರ ಮೇಲೆ ಲಾಠಿಪ್ರಹಾರ ಮಾಡಿದ ಪೊಲೀಸರು ಮತ್ತು ಜಿಲ್ಲಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರೈತ ಸಂಘಟನೆಗಳು ಆಗ್ರಹಪಡಿಸಲಿದ್ದಾರೆ.
PublicNext
11/09/2021 07:56 am