ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೃಷಿ ಕಾಯ್ದೆಗಳ ವಿರುದ್ಧ ಅನ್ನದಾತರ ಆಕ್ರೋಶ: ಭಾರತ್ ಬಂದ್ ಗೆ ಉತ್ತಮ ಬೆಂಬಲ

ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ಅನ್ನದಾತರ ಹೋರಾಟ ಆಕ್ರೋಶಗ ಭುಗಿಲೆದ್ದಿದೆ. ಕೇಂದ್ರ ಸರ್ಕಾರ ಐದು ಬಾರಿ ಸಭೆ ನಡೆಸಿದ್ರೂ, ಬಯಸಿದ ಫಲಿತಾಂಶ ಸಿಗದ ಹಿನ್ನೆಲೆಯಲ್ಲಿ ರೈತ ಸಂಘಟನೆಗಳು ಇಂದು ಭಾರತ್ ಬಂದ್‍ಗೆ ಕರೆ ನೀಡಿವೆ. ಈ ಬಂದ್‍ಗೆ ದೇಶವ್ಯಾಪಿ ಬೆಂಬಲ ಸಿಕ್ಕಿದೆ.

ಎನ್‍ಡಿಎಯೇತರ ಪಕ್ಷಗಳು ಭಾರತ್ ಬಂದ್‍ಗೆ ಸಂಪೂರ್ಣ ಬೆಂಬಲ ಘೋಷಿಸಿವೆ. ಕಾಂಗ್ರೆಸ್, ಶಿವಸೇನೆ, ಎನ್‍ಸಿಪಿ, ಸಮಾಜವಾದಿ ಪಕ್ಷ, ಡಿಎಂಕೆ, ಆರ್‍ಜೆಡಿ, ತೃಣಮೂಲ ಕಾಂಗ್ರೆಸ್, ಎಎಪಿ, ಗುಪ್ಕಾರ್ ಕೂಟ, ಎಡಪಕ್ಷಗಳು, ಶಿರೋಮಣಿ ಅಕಾಲಿ ದಳ, ಬಿಎಸ್‍ಪಿ, ಜೆಡಿಎಸ್, ಟಿಆರ್‍ಎಸ್, ತೆಲುಗುದೇಶಂ ಸೇರಿದಂತೆ ಹಲವು ಪಕ್ಷಗಳು ಬಂದ್‍ಗೆ ಬೆಂಬಲ ಸೂಚಿಸಿವೆ. ಹೀಗಾಗಿ ಬಿಜೆಪಿಯೇತರ ರಾಜ್ಯಗಳಲ್ಲಿ ಬಂದ್ ತೀವ್ರತೆ ಹೆಚ್ಚು ಕಂಡು ಬರಲಿದೆ.

ಜೊತೆಗೆ ಲಾರಿ ಮಾಲೀಕರ ಸಂಘ, 10 ಕಾರ್ಮಿಕ ಸಂಘಟನೆಗಳು, ಬ್ಯಾಂಕ್ ಯೂನಿಯನ್ ಸೇರಿ ಇತರೆ ಹಲವು ಸಂಘಟನೆಗಳು ರೈತರ ಪರ ದನಿ ಎತ್ತಿವೆ.

ಪಂಜಾಬ್, ದೆಹಲಿ, ಮಹಾರಾಷ್ಟ್ರ, ಕೇರಳ, ಪುದುಚ್ಚೆರಿ, ಪಶ್ಚಿಮ ಬಂಗಾಳ, ರಾಜಸ್ಥಾನ, ತೆಲಂಗಾಣ, ಛತ್ತೀಸ್‍ಘಡ, ಜಮ್ಮು ಕಾಶ್ಮೀರ, ಜಾರ್ಖಂಡ್ ನಲ್ಲಿ ಕಂಪ್ಲೀಟ್ ಬಂದ್ ಆಗಲಿದೆ.

Edited By : Nagaraj Tulugeri
PublicNext

PublicNext

08/12/2020 07:50 am

Cinque Terre

106.21 K

Cinque Terre

8

ಸಂಬಂಧಿತ ಸುದ್ದಿ