ಶಿವಮೊಗ್ಗ/ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಿರಾಳರಾಗಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಅವರ ವಿರುದ್ಧ ದಾಖಲಾಗಿದ್ದ ಮೂರು ಪ್ರಕರಣಗಳನ್ನು ವಾಪಾಸ್ ಪಡೆದ ನಂತರ ಅವರಿಗೆ ನೆಮ್ಮದಿ ದೊರೆತಂತಾಗಿದೆ.
ಶಿವಮೊಗ್ಗ ಮೂಲದ ವಕೀಲ ಬಿ. ವಿನೋದ್ ಎಂಬುವವರು ಯಡಿಯೂರಪ್ಪ ಹಾಗೂ ಅವರ ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇಂದು ಈ ಸಂಬಂಧ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯಬೇಕಿತ್ತು.
ಆದರೆ ದೂರು ದಾಖಲಿಸಿದ್ದ ವಕೀಲ ವಿನೋದ್ ಅವರು ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರ ಮುಂದೆ ಹಾಜರಾಗಿ ತಾವು ದಾಖಲಿಸಿದ ಮೂರು ಪ್ರಕರಣಗಳನ್ನು ಹಿಂದಕ್ಕೆ ಪಡೆಯುವುದಾಗಿ ಹೇಳಿದ್ದಾರೆ. ಅವರ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ.
ಸಿಎಂ ಯಡಿಯೂರಪ್ಪ ತಾವು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ವೇಳೆ ಹುಣಸೇಕಟ್ಟೆ, ಕೋಟೆಗಂಗೂರು ಮತ್ತು ಕೆಹೆಚ್‌ಬಿ ಕಾಲೋನಿಗಳಲ್ಲಿ ಅಧಿಕಾರ ಬಳಸಿ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂದು ಆರೋಪಿಸಿ ವಿನೋದ್ ಪ್ರಕರಣ ದಾಖಲಿಸಿದ್ದರು.
PublicNext
04/11/2020 03:16 pm