ಮುಂಬೈ: ಮರಾಠಿ ಭಾಷಿಕರಿರುವ ಕರ್ನಾಟಕ ಗಡಿ ಪ್ರದೇಶಗಳು ಶೀಘ್ರದಲ್ಲೇ ಮಹಾರಾಷ್ಟ್ರಕ್ಕೆ ಸೇರಲಿವೆ ಎಂದು ಮಹಾರಾಷ್ಟ್ರ ಜಲಸಂಪನ್ಮೂಲ ಸಚಿವ ಜಯಂತ್ ಪಾಟೀಲ್ ಹೇಳಿದ್ದಾರೆ.
ಮರಾಠಿ ಸಹೋದರರನ್ನು ಬೆಂಬಲಿಸಿ ಎನ್‌ಸಿಪಿ ಇಂದು ಕರಾಳ ದಿನ ಆಚರಿಸುತ್ತಿದೆ. ಈ ವೇಳೆ ಪ್ರತಿಭಟನೆಯ ಕುರುಹಾಗಿ ಕಪ್ಪು ರಿಬ್ಬನ್ ಕಟ್ಟಿಕೊಳ್ಲಲಾಗಿದೆ. ಕರ್ನಾಟಕದ ಮರಾಠಿ ಗಡಿ ನಿವಾಸಿಗಳ ವಿರುದ್ಧದ ಅನ್ಯಾಯ, ದೌರ್ಜನ್ಯ ಮತ್ತು ದಬ್ಬಾಳಿಕೆ ಸಹಿಸಲಾಗದು. ಈ ಸಂಬಂಧ ರಾಜ್ಯದ ಎನ್‌ಸಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಗಡಿ ಪ್ರದೇಶಗಳಲ್ಲಿ ಸಮಸ್ಯೆಯಲ್ಲಿರುವ ಜನರ ಬೆಂಬಲಕ್ಕೆ ಇಡೀ ಮಹಾರಾಷ್ಟ್ರ ಜನರಿದ್ದಾರೆ ಎಂದು ಹೇಳಿದರು.
PublicNext
01/11/2020 06:59 pm