ತುಮಕೂರು- ಶಿರಾ ಕ್ಷೇತ್ರದ ಉಪಚುನಾವಣೆ ಅಖಾಡ ಒಂದಿಲ್ಲೊಂದು ಆಸಕ್ತಿಕರ ಸಂಗತಿಗೆ ಸಾಕ್ಷಿಯಾಗಿದೆ. ಈಗ ಮತ್ತೊಂದು ಪೇಚಿನ ಸಂಗತಿ ಏನಂದ್ರೆ ಪ್ರಚಾರಕ್ಕೆ ಹೋಗಿದ್ದ ಶಾಸಕ ಜಮೀರ್ ಅಹ್ಮದ್ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ.
ಇವತ್ತು ತಮ್ಮ ಪಕ್ಷದ ಅಭ್ಯರ್ಥಿ ಟಿ ಬಿ ಜಯಚಂದ್ರ ಪರ ಪ್ರಚಾರ ಮಾಡಲು ಹೋಗಿದ್ದ ಜಮೀರ್ ಅಹ್ಮದ್ ಅಲ್ಪಸಂಖ್ಯಾತ ಸಮುದಾಯ ಇರುವ ಬೇಗಂ ಮೊಹಲ್ಲಾಗೆ ಹೋಗಿದ್ದಾರೆ. ಈ ವೇಳೆ ಅವರಿಗೆ ಒಂದು ಟೀ ಅಂಗಡಿ ಕಂಡಿದೆ. ಟೀ ಅಂಗಡಿಯತ್ತ ಧಾವಿಸಿದ ಜಮೀರ್ ಅಹ್ಮದ್ ತಾವೇ ಖುದ್ದಾಗಿ ಅಲ್ಲಿ ಟೀ ತಯಾರಿಸಿದ್ದಾರೆ. ಮತ್ತು ಅಲ್ಲಿದ್ದ ಅಕ್ಕಪಕ್ಕದವರಿಗೆ ಟೀ ಕುಡಿಯಲು ಕೊಟ್ಟಿದ್ದಾರೆ. ಎಲ್ಲರೂ ಕುಡಿದ ನಂತರ ಟೀ ಅಂಗಡಿ ಮಾಲೀಕನಿಗೆ ಶಾಸಕ ಜಮೀರ್ ಅಹ್ಮದ್ ನೋಟುಗಳ ಕಟ್ಟನ್ನೇ ಕೊಟ್ಟಿದ್ದಾರೆ.
ಇದು ಈಗ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗಿದೆ.
PublicNext
31/10/2020 07:17 pm