ಬೆಂಗಳೂರು- ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ರಕ್ತ ಕಳೆದ ವರ್ಷ ಕೆಂಪು ಬಣ್ಣದ್ದಾಗಿತ್ತು. ಆದ್ರೆ ಈ ವರ್ಷ ಅವರ ರಕ್ತ ಕೇಸರಿಯಾಗಿದೆ ಎಂದು ಸಂಸದ ಡಿಕೆ ಸುರೇಶ್ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ನನ್ನ ತಾಯಿ ಅಂತ ಸ್ವತಃ ಮುನಿರತ್ನ ಅವರೇ ಹಿಂದೊಮ್ಮೆ ಹೇಳಿದ್ರು. ಈ ಮಾತನ್ನು ಮೊದಲು ಹೇಳಿದ್ದು ನಾನು. ನನ್ನ ಮಾತನ್ನೇ ಅವರು ಕಾಪಿ ಹೊಡೆದು ಪೇಸ್ಟ್ ಮಾಡಿದ್ದಾರೆ. ಯಾವುದನ್ನ ಎಲ್ಲೆಲ್ಲಿ ಕಾಪಿ-ಪೇಸ್ಟ್ ಮಾಡಬೇಕು ಅನ್ನೋದು ಮುನಿರತ್ನ ಅವರಿಗೆ ಗೊತ್ತಿದೆ. ಯಾಕಂದ್ರೆ ಅವರು ಅದೇ ವೃತ್ತಿಯ ಹಿನ್ನಲೆಯಿಂದ ಬಂದವರು. ಆ ಕೆಲಸ ಚೆನ್ನಾಗಿ ಮಾಡ್ತಾರೆ ಎಂದು ಡಿಕೆ ಸುರೇಶ್, ಮುನಿರತ್ನ ಅವರ ಕಾಲೆಳೆದಿದ್ದಾರೆ.
ಎಷ್ಟೇ ಆಗಲಿ. ಅವರು ನಿರ್ಮಾಪಕರು, ಹೀಗಾಗಿ ಕಣ್ಣೀರು ಹಾಕೋದೂ ಗೊತ್ತು. ಹಾಕಿಸೋದೂ ಗೊತ್ತು. ಜೋಡಿಸೋದು, ಕಟ್ ಮಾಡೋದೂ ಕೂಡ ಗೊತ್ತು. ಅವತ್ತು ಕಾಂಗ್ರೆಸ್ ಪಕ್ಷವನ್ನು ತಾಯಿ ಎಂದು ಹೇಳಿ ಈಗ ಬೇರೆ ಪಕ್ಷಕ್ಕೆ ಹೋಗಿ ತಾಯಿಗೆ ದ್ರೋಹ ಬಗೆದಿದ್ದಾರೆ ಎಂದು ಡಿಕೆ ಸುರೇಶ್ ಆವರು ಮುನಿರತ್ನ ಅವರ ನಡೆಯನ್ನು ಖಂಡಿಸಿದ್ದಾರೆ.
PublicNext
28/10/2020 04:37 pm