ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೂಂಡಾಗಿರಿಗೆ ಮತ್ತೊಂದು ಹೆಸರು ಡಿಕೆ ಬ್ರದರ್ಸ್

ದಾವಣಗೆರೆ- ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಅವರ ಸಹೋದರ ಡಿಕೆ ಸುರೇಶ್ ಅವರು ಗೂಂಡಾಗಿರಿಗೆ ಮತ್ತೊಂದು ಹೆಸರು ಅಂತಾ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

ಹೊನ್ನಾಳಿ ತಾಲೂಕಿನ ಹಿರೇಕಲ್ಮಠದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಆರ್ ಆರ್ ನಗರದ 'ಕೈ' ಅಭ್ಯರ್ಥಿ ಮೇಲೆ ಬಿಜೆಪಿಯವರು ದೌರ್ಜನ್ಯ ಮಾಡ್ತಿದ್ದಾರೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ನಾವು ದೌರ್ಜನ್ಯ ಮಾಡಿದ್ರೆ ಅವರು ತಪಸ್ಸು ಮಾಡ್ತಾ ಕೂತಿದ್ದಾರೆ ಪಾಪ ಎಂದು ಲೇವಡಿ ಮಾಡಿದರು.

ಡಿಕೆ ಬ್ರದರ್ಸ್ ಎಂತವರು ಅನ್ನೋದು ಇಡೀ ರಾಜ್ಯಕ್ಕೆ ಗೊತ್ತಿದೆ. ತಮ್ಮ ಸ್ವಾರ್ಥದ ಬೇಳೆ ಬೇಯಿಸಿಕೊಳ್ಳಲು ಎಂತಹ ಹೇಳಿಕೆಯನ್ನಾದ್ರೂ ಕೊಡ್ತಾರೆ ಎಂದು ಈಶ್ವರಪ್ಪ ಹೇಳಿದರು.

ಇನ್ನು ಸಿಎಂ ಯಡಿಯೂರಪ್ಪ ವಿರುದ್ಧ ಮಾತನಾಡಿದ ಶಾಸಕ ಬಸವರಾಜ್ ಪಾಟೀಲ್ ಯತ್ನಾಳ್ ಬಗ್ಗೆ ತಣ್ಣಗಿನ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಆತ ಪಕ್ಷಕ್ಕೆ ಪದೇ ಪದೇ ಕಿರಿಕಿರಿ ಮಾಡ್ತಿದ್ದಾನೆ ಅನ್ನೋದು ಜನಕ್ಕೆ ತಿಳಿದಿದೆ. ಅವನ ಮೇಲೆ ಕ್ರಮ ಕೈಗೊಳ್ಳುವಂತೆ ಪಕ್ಷದ ವರಿಷ್ಠರು ಹಾಗೂ ರಾಜ್ಯಾಧ್ಯಕ್ಷರಿಗೆ ತಿಳಿಸಿದ್ದೇನೆ. ಅವರು ಶಿಸ್ತು ಕ್ರಮ ಕೈಗೊಳ್ಳುತ್ತಾರೆ ಎಂದರು.

Edited By : Nagaraj Tulugeri
PublicNext

PublicNext

24/10/2020 08:29 am

Cinque Terre

110.98 K

Cinque Terre

17

ಸಂಬಂಧಿತ ಸುದ್ದಿ