ಬೆಂಗಳೂರು: ಕುಣಿಲಾಗದವರು ನೆಲ ಡೊಂಕು ಅಂತ ಹೇಳ್ತಾರೆ ಎಂಬ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, 'ಮೈತ್ರಿ ಸರ್ಕಾರದ 14 ತಿಂಗಳ ಅವಧಿಯಲ್ಲಿ ಹಲವು ಚಿತ್ರಹಿಂಸೆಗಳ ನಡುವೆಯೂ ರಾಜ್ಯದ ರೈತರ ಸಾಲಮನ್ನಾ ಸೇರಿದಂತೆ ಹಲವು ಕೊಡುಗೆಗಳನ್ನು ನೀಡಿದ್ದೆ. ರಾಜ್ಯ ರೈತರ ಸಾಲಮನ್ನಾದಂತಹ ದಾಖಲೆಯ ಯೋಜನೆಯನ್ನು ಜಾರಿ ಮಾಡಿದ್ದೆ. ಈಗ ಪ್ರಧಾನಿ ಮೋದಿ ಅವರು ಹೇಳುತ್ತೀರುವ ಆತ್ಮ ನಿರ್ಭರ ಭಾರತ ಕಾರ್ಯಕ್ರಮದ ಹಿನ್ನೆಲೆಯ ದೂರ ದೃಷ್ಟಿಯೊಂದಿಗೆ 9 ಕೈಗಾರಿಕಾ ಕ್ಲಸ್ಟರ್ ಪ್ರಾರಂಭ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೆ. ಆದ್ದರಿಂದ ನನಗೆ ಕುಣಿಯಲು ಬರುತ್ತೆ. ಇವರಿಂದ ಅದನ್ನು ನಾನು ಹೇಳಿಸಿಕೊಳ್ಳ ಬೇಕಿಲ್ಲ. ಜನರೇ ಎಲ್ಲವನ್ನು ತೀರ್ಮಾನ ಮಾಡುತ್ತಾರೆ ಎಂದು ಗುಡುಗಿದರು.
PublicNext
20/10/2020 11:35 pm