ವಿಜಯಪುರ: ಉತ್ತರ ಕರ್ನಾಟಕದವರೇ ಮುಂದಿನ ಮುಖ್ಯಮಂತ್ರಿ ಅಂತ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
ಹೌದು... ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಶಾಸಕ ಯತ್ನಾಳ್ ಅವರಿಗೆ ಅಸಮಾಧಾನ ಇರುವುದು ಗೊತ್ತಿರುವ ವಿಚಾರ. ಆದ್ರೆ ಈ ಬಾರಿ ಯತ್ನಾಳ್ ಅವರು ಬಿಎಸ್‌ವೈ ಸಿಎಂ ಪಟ್ಟವನ್ನ ತಪ್ಪಿಸುವ ಬಗ್ಗೆ ಮಾತನಾಡಿದ್ದಾರೆ.
ವಿಜಯಪುರದ ವಾರ್ಡ್ 3 ರಲ್ಲಿ ನಡೆದ ಹನುಮಾನ ದೇವಸ್ಥಾನದ ಕಂಪೌಂಡ್ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಿಎಂ ಯಡಿಯೂರಪ್ಪ ಅವರ ವಿರುದ್ಧ ಕಿಡಿಕಾರಿದ್ದಾರೆ.
ಬಿಎಸ್್ವೈ ಬಗ್ಗೆ ಬಿಜೆಪಿ ಹೈಕಮಾಂಡ್ ನಾಯಕರಿಗೂ ಗೊತ್ತಾಗಿದೆ. ರಾಜ್ಯಕ್ಕೆ ಬರುತ್ತಿರುವ ಅನುದಾನವನ್ನು ಸಿಎಂ ಶಿವಮೊಗ್ಗಾಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಉಮೇಶ ಕತ್ತಿ ಕೂಡ ಈ ಬಗ್ಗೆ ಮಾತಾನಾಡಿದ್ದಾರೆ. ಅವರೇನು ಶಿವಮೊಗ್ಗ ಮುಖ್ಯಮಂತ್ರಿಯೋ ಅಥವಾ ಕರ್ನಾಟಕ ಮುಖ್ಯಮಂತ್ರಿಯೋ. ಅವರು ಸಿಎಂ ಸ್ಥಾನದಲ್ಲಿ ಬಹಳ ದಿನ ಇರೋದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
PublicNext
20/10/2020 02:36 pm