ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದಲ್ಲಿ ವಿಶೇಷ ಸ್ಥಾನಮಾನ ಮರಳಿ ತರುವಂತೆ ಕಾಶ್ಮೀರದ ಪ್ರಾದೇಶಿಕ ಪಕ್ಷಗಳು ಒಗ್ಗೂಡಿವೆ. ಈ ನಿಟ್ಟಿನಲ್ಲಿ ಪೀಪಲ್ಸ್ ಅಲಾಯನ್ಸ್ ಫಾರ್ ಗುಪ್ಕರ್ ಡಿಕ್ಲರೇಶನ್ ಎಂಬ ಹೆಸರಿನಲ್ಲಿ ಮೈತ್ರಿಕೂಟ ರಚನೆ ಮಾಡಲಾಗಿದೆ.
370ನೇ ವಿಧಿಯನ್ನ ಪುನಃಸೇರಿಸಲು ಹೋರಾಟ ಮಾಡುವುದು ಈ ಮೈತ್ರಿಯ ಉದ್ದೇಶ. ನ್ಯಾಷನಲ್ ಕಾನ್ಫೆರೆನ್ಸ್, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಹಾಗೂ ಇತರ ಪ್ರಾದೇಶಿಕ ಸಂಘಟನೆಗಳು ಈ ಮೈತ್ರಿಕೂಟದಲ್ಲಿವೆ. ಸಾಜದ್ ಲೋನೆ ಕೂಡ ಇದಕ್ಕೆ ಕೈ ಜೋಡಿಸಿದ್ದಾರೆ. ನ್ಯಾಷನಲ್ ಕಾನ್ಫೆರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರು ಈ ಮೈತ್ರಿಕೂಟ ರಚನೆಯನ್ನು ಘೋಷಿಸಿದ್ದಾರೆ.
ಈ ಕುರಿತು ಫಾರೂಕ್ ಅಬ್ದುಲ್ಲಾ ಮಾತನಾಡಿ, ಈ ಮೈತ್ರಿಕೂಟಕ್ಕೆ ‘ಪೀಪಲ್ಸ್ ಅಲಾಯನ್ಸ್ ಫಾರ್ ಗುಪ್ಕರ್ ಡಿಕ್ಲರೇಶನ್’ ಎಂದು ಹೆಸರಿಸಿದ್ದೇವೆ. ನಮ್ಮದು ಸಂವಿಧಾನಿಕ ಹೋರಾಟ. 2019ರ ಆಗಸ್ಟ್ 5ಕ್ಕೆ ಮುಂಚೆ ಇದ್ದ ಕಾಶ್ಮೀರಿಗಳ ಹಕ್ಕನ್ನು ಮರಳಬೇಕೆಂಬುದು ನಮ್ಮ ಆಗ್ರಹ ಎಂದು ಹೇಳಿದ್ದಾರೆ.
PublicNext
15/10/2020 09:30 pm