ತುಮಕೂರು: ಪೋಸ್ಟಿಂಗ್‌ಗಾಗಿ ಅಧಿಕಾರಿಯೊಬ್ಬರು 1 ಕೋಟಿ ರೂ. ಲಂಚದ ಆಮಿಷವೊಡ್ಡಿದ್ದರು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ಶಿರಾದಲ್ಲಿ ಮಾತನಾಡಿದ ಮಾಜಿ ಸಿಎಂ, ತಹಶೀಲ್ದಾರ್ ಪೋಸ್ಟಿಂಗ್‌ಗಾಗಿ ಬಿಜೆಪಿಗೆ 1.5 ಕೋಟಿ ಪೇಮೆಂಟ್ ಆಗಿದೆ. ಇದಕ್ಕೂ ಮುನ್ನ ನಾನು ಮುಖ್ಯಮಂತ್ರಿಯಾಗಿದ್ದಾಗ ರಘುಮೂರ್ತಿಗೆ ಯಲಹಂಕದಲ್ಲಿ ಪೋಸ್ಟಿಂಗ್ ಮಾಡಲು ನನ್ನನ್ನು ಭೇಟಿಯಾಗಿ ಮನವಿ ಮಾಡಿದ್ದರು. ಒಂದು ಕೋಟಿ ರೂ. ಲಂಚ ನೀಡುವುದಾಗಿ ಆಮಿಷವೊಡ್ಡಿದ್ದರು. ರಘುಮೂರ್ತಿ ಕಡೆಯವರ ಆಮಿಷವನ್ನು ನಾನು ತಿರಸ್ಕರಿಸಿದ್ದೆ. ಸಮ್ಮಿಶ್ರ ಸರ್ಕಾರ ಪತನ ನಂತರ ಬಿಜೆಪಿ ಅಧಿಕಾರಕ್ಕೆ ಬಂತು. ಬಿಜೆಪಿ ಸರ್ಕಾರ ರಘುಮೂರ್ತಿಗೆ ಬೆಂಗಳೂರಿನ ಯಲಹಂಕ ತಹಶೀಲ್ದಾರ್ ಆಗಿ ಪೋಸ್ಟಿಂಗ್ ನೀಡಿತ್ತು ಎಂದು ಗಂಭೀರ ಆರೋಪ ಮಾಡಿದ್ದಾರೆ.
ಯಲಹಂಕ ಕ್ಷೇತ್ರದ ಶಾಸಕರಿಗೂ 50 ಲಕ್ಷ ರೂ. ಹೋಗಿದೆ. ಇಂತಹ ತಹಶೀಲ್ದಾರ್ ಸಸ್ಪೆಂಡ್ಗೆ ಈಗ ಶಿಫಾರಸು ಮಾಡಿದ್ದಾರೆ ಎಂದು ದೂರಿದ್ದಾರೆ.
PublicNext
30/09/2020 08:58 pm