ನವದೆಹಲಿ: ಭಾರತ್‌ಪೆ ಕಂಪನಿಯ ಕಂಟ್ರೋಲ್ಸ್ ಹೆಡ್ ಮಾಧುರಿ ಜೈನ್ ಗ್ರೋವರ್ ಇಡೀ ಕಂಪನಿ ವಿರುದ್ಧವೇ ಬಂಡೆದ್ದು ಕೂತಿದ್ದಾರೆ.ಕಂಪನಿಯಲ್ಲಿ ನಡೆದ ಡ್ರಿಂಕ್ಸ್ ಪಾರ್ಟಿಯ ವೀಡಿಯೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡ್ತಾನೇ ತಮ್ಮ ಆಕ್ರೋಶವನ್ನ ಹೊರಗೆ ಹಾಕುತ್ತಿದ್ದಾರೆ.
ಭಾರತ್‌ಪೆ ಕಂಪನಿಯ ಕೋ ಫೌಂಡರ್ ಅಶ್ನೀರ್ ಗ್ರೋವರ್ ಪತ್ನಿ ಈ ಮಾಧುರಿ ಜೈನ ಗ್ರೋವರ್. ಕಂಪನಿಯ ಕಂಟ್ರೋಲ್ಸ್ ಹೆಡ್ ಆಗಿಯೇ ಕೆಲಸ ಮಾಡಿದವರು. ಆದರೆ ಹಣಕಾಸಿನ ವಿಚಾರದಲ್ಲಿ ಅಕ್ರಮ ನಡೆಸಿದ್ದಾರೆ ಅನ್ನೋ ಆರೋಪದ ಮೇಲೆ ಈಗ ವಜಾಗೊಂಡಿದ್ದಾರೆ.
ವಜಾಗೊಳಿಸಿದ್ದಕ್ಕೋ ಏನೋ ಮಾಧುರಿ ಸದ್ಯ ಇರೋ ಸಿಇಓ ಸುಹೇಲ್ ಸಮೀರ್ ಮತ್ತು ಸಹ ಸಂಸ್ಥಾಪಕ ಭಾವಿಕ್ ಕೊಡಲಿಯಾ ಅವರ ಪಾರ್ಟಿ ವೀಡಿಯೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಜನ್ಮ ಜಾಲಾಡುತ್ತಿದ್ದಾರೆ.
ಇವರೆಲ್ಲ ಸೇರಿ ಕಂಪನಿಯಲ್ಲಿದ್ದ ಸಂಸ್ಕೃತಿಯನ್ನ ಹಾಳು ಮಾಡಿ ಹಾಕಿದ್ದಾರೆ. ಇವರಾರೂ ಸರಿ ಇಲ್ಲ ಅನ್ನೋ ಅರ್ಥದಲ್ಲಿಯೇ ಮಾಧುರಿ ಜೈನ್ ಗ್ರೋವರ್ ಸೋಷಿಯಲ್ ಮೀಡಿಯಾದಲ್ಲಿ ಸರಣಿ ಟ್ವೀಟ್ ಮಾಡಿ ದೂರುತ್ತಲೇ ಇದ್ದಾರೆ.
PublicNext
24/02/2022 10:12 pm