ದೇವನಹಳ್ಳಿ : ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ತಮ್ಮ ಮರೆವು ಮತ್ತು ಗಡಿಬಿಡಿಯಲ್ಲಿ ಕಳೆದ 8 ತಿಂಗಳಲ್ಲಿ ಆಹಾರ ಪದಾರ್ಥಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ 32,169 ವಸ್ತುಗಳನ್ನ ಬಿಟ್ಟು ಹೋಗಿದ್ದಾರೆ,
ಈ ವರ್ಷದ ಎಪ್ರಿಲ್ 1 ರಿಂದ ನವೆಂಬರ್ 30ರ ವರೆಗೆ 9.962 ವಸ್ತುಗಳನ್ನ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಕಳೆದುಕೊಂಡಿದ್ದು ನಂತರ ಪತ್ತೆಯಾದ ವಸ್ತುಗಳನ್ನ ವಿಮಾನ ನಿಲ್ದಾಣದಲ್ಲಿ ಇಡಲಾಗಿದೆ, ಪ್ರಮುಖವಾಗಿ ವೈಯಕ್ತಿಕ ಗ್ಯಾಡ್ಜೆಟ್ ಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನ ಪ್ರಯಾಣಿಕರು ಮರೆತು ಬಿಟ್ಟು ಹೋಗಿದ್ದಾರೆ, ಮರೆತು ಹೋಗಿರುವ ವಸ್ತುಗಳಲ್ಲಿ ಶೇಕಡಾ 30 ರಷ್ಟು ಎಲೆಕ್ಟ್ರಾನಿಕ್ ವಸ್ತುಗಳಾಗಿವೆ.
ಪ್ರಯಾಣಿಕರು ಮರೆತು ಬಿಟ್ಟು ಹೋದ ವಸ್ತುಗಳು ಪ್ರೀ-ಎಂಬಾರ್ಕೇಶನ್ ಸೆಕ್ಯೂರಿಟಿ ಚೆಕ್ ( PSEC) ಪ್ರದೇಶದಲ್ಲಿ ಸಿಕ್ಕಿವೆ, 1089 ಚಿನ್ನಾಭರಣ, 2083 ಪ್ರಕರಣಗಳು ನಗದು ಹಣ ಮರೆತು ಬಿಟ್ಟು ಹೋಗಿರುವುದು ಪತ್ತೆಯಾಗಿದೆ, ಕೋವಿಡ್ -19 ಅವಧಿಯಲ್ಲಿ ಕೇವಲ 21,273 ವಸ್ತುಗಳು ಪತ್ತೆಯಾಗಿದೆ ಇನ್ನೂ 2019-20 ಸಾಲಿನಲ್ಲಿ 42, 339 ವಸ್ತುಗಳು ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿವೆ ಎಂದು ಬಿಐಎಎಲ್ ಮೂಲಗಳು ತಿಳಿಸಿವೆ.
ಬಿಐಎಎಲ್ ನಿಯಮದ ಪ್ರಕಾರ ಬಿಟ್ಟು ಹೋದ ವಸ್ತುಗಳನ್ನ ಒಂದು ತಿಂಗಳ ಕಾಲ ಹಾಗೆಯೇ ಇಟ್ಟಿರಲಾಗುವುದು, ಈ ಅವಧಿಯಲ್ಲಿ ಪ್ರಯಾಣಿಕರು ತಮ್ಮ ವಸ್ತುಗಳನ್ನ ಪಡೆಯದಿದ್ದಲ್ಲಿ ವಿಲೇವಾರಿ ಮಾಡಲಾಗುವುದು, ಬ್ಯಾಂಕ್ ಕಾರ್ಡ್, ಚೆಕ್ ಪುಸ್ತಕಗಳು, ಪಾಸ್ ಬುಕ್ ಗಳನ್ನು 48 ಗಂಟೆಗಳ ಒಳಗಾಗಿ ಕಳೆದುಕೊಂಡವರಿಗೆ ತಲುಪಿಸಲಾಗುತ್ತದೆ. ಆಹಾರ ಪದಾರ್ಥಗಳನ್ನು 23 ಗಂಟೆಗಳ ಒಳಗಾಗಿ ವಿಲೇವಾರಿ ಮಾಡಲಾಗುತ್ತದೆ.
ಪತ್ತೆಯಾದ ವಸ್ತುಗಳ ಬಗ್ಗೆ ಮಾಹಿತಿಯನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಈ ವೆಬ್ ಸೈಟ್ ನಲ್ಲಿ (https://www.bengaluruairport.com/travellers/passenger-services/lost-found.html) ಅಪ್ಲೋಡ್ ಮಾಡಲಾಗುತ್ತದೆ. ಮರೆತು ಹೋದ ವಸ್ತುಗಳ ಮಾಹಿತಿ ಮತ್ತು ದಿನಾಂಕವನ್ನ ವೆಬ್ ಸೆಟ್ ನಲ್ಲಿ ನಮೂದಿಸುವ ಮೂಲಕ ಕಳೆದು ಹೋದ ವಸ್ತುಗಳನ್ನ ಮತ್ತೆ ಪಡೆಯಬಹುದು.
PublicNext
14/12/2021 03:17 pm