ಸದ್ಯದ ದಿನಗಳಲ್ಲಿ ಆನ್ ಲೈನ್ ಖರೀದಿಗಳಲ್ಲಿ ಎಡವಟ್ಟುಗಳೇ ಜಾಸ್ತಿ ಆಗುತ್ತಿವೆ.ಇಲ್ಲೊಬ್ಬ ಫುಟ್ಬಾಲ್ ಆಟಗಾರ ತನಗೆ ಬೇಕೆಂದು ಪುಟ್ಬಾಲ್ ಸ್ಟಾಕಿಂಗ್ಸ್ (ಆಟ ಆಡೋವಾಗ ಧರಿಸೋ ಉದ್ಧನೆಯ ಸಾಕ್ಸ್) ಮೈಂತ್ರಾದಲ್ಲಿ ಆರ್ಡರ್ ಮಾಡಿದ್ದರು. ಆದರೆ ಅವರ ಮನೆಗೆ ಬಂದದ್ದು ಏನು ಗೊತ್ತೆ ? 34 ಸೈಜಿನ ಮಹಿಳೆಯರ (ಬ್ರಾ)ಒಳ ಉಡುಪು. ಇದನ್ನ ಕಂಡ ಆ ಆಟಗಾರ ಶಾಕ್ ಕೂಡ ಆಗಿದ್ದಾರೆ. ಅದರದೊಂದು ಫೋಟೋ ತೆಗೆದು ಟ್ವಿಟರ್ ಅಲ್ಲೂ ಹಂಚಿಕೊಂಡಿದ್ದಾರೆ. ಆಟವಾಡೊವಾಗ ಇನ್ಮುಂದೇ ಇದನ್ನೆ ಧರಿಸುತ್ತೇನೆ ಅಂತಲೂ ವ್ಯಂಗ್ಯವಾಡಿದ್ದಾರೆ. ಈ ಟ್ವೀಟ್ ಬಳಿಕ ಕಂಪನಿ, ಹಣವನ್ನ ವಾಪಾಸ್ ಕೊಡೋ ಪ್ರಕ್ರಿಯೆ ನಡೆಯುತ್ತಿದೆ ಅಂತಲೇ ರಿಯಾಕ್ಟ್ ಮಾಡಿದೆ. ಅಷ್ಟೆ.
PublicNext
19/10/2021 05:41 pm