ಬೆಳಗಾವಿ: ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಕ್ಕೆ ಒಳಗಾಗಿ ಕೊನೆಯುಸಿರೆಳೆದಿದ್ದ ಬಿಎಸ್ಎಫ್ ಯೋಧ ವಿಷ್ಣು ಕಾಂಬಳೆ (56) ಪಾರ್ಥಿವ ಶರೀರವು ಹುಟ್ಟೂರಿಗೆ ಬಂದಿದೆ.
ಹುತಾತ್ಮ ಬಿಎಸ್ಎಫ್ ಯೋಧ ವಿಷ್ಣು ಕಾಂಬಳೆ ಅವರ ಅಂತ್ಯಕ್ರಿಯೆ ಇಂದು ಸ್ವಗ್ರಾಮ ರಾಯಭಾಗ ಪಟ್ಟಣದಲ್ಲಿ ಆಗಲಿದೆ. ವಿಷ್ಣು ಅವರು ಸುಮಾರು 39 ವರ್ಷಗಳ ಕಾಲ ಬಿಎಸ್ಎಫ್ ಯೋಧರಾಗಿ ಸೇವೆ ಸಲ್ಲಿಸಿದ್ದಾರೆ.
ಕೋಲ್ಕತ್ತಾದ 100 ಬೆಟಾಲಿಯನ್ನಲ್ಲಿ ಸೇವೆ ಸಲ್ಲಿಸುತ್ತಿದ್ದ ವೇಳೆ ಸೆಪ್ಟೆಂಬರ್ 8ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಈಗ ಮೃತ ಅವರ ಪಾರ್ಥಿವ ಶರೀರ ಗೌಹಾಟಿಯಿಂದ ಬೆಂಗಳೂರು ಮೂಲಕ ಹುಟ್ಟೂರಿಗೆ ಆಗಮಿಸಿದೆ. ಸಕಲ ಸರ್ಕಾರಿ ಗೌರವದೊಂದಿಗೆ ಹುಟ್ಟೂರು ರಾಯಭಾಗದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
PublicNext
12/09/2021 09:00 am