ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೆಹಲಿಯಲ್ಲಿ ಕಟ್ಟಡ ಕುಸಿತ: ಅಗ್ನಿಶಾಮಕ ದಳದಿಂದ ರಕ್ಷಣಾ ಕಾರ್ಯ

ನವದೆಹಲಿ: ನಗರದ ಸರ್ದಾರ್ ಬಜಾರ್‌ನಲ್ಲಿ ವಸತಿ ಕಟ್ಟಡವೊಂದು ಏಕಾಏಕಿ ಕುಸಿದು ಬಿದ್ದಿದೆ. ಪರಿಣಾಮ ಕೆಲವು ಜನ ಅವಶೇಷದಡಿ ಸಿಲುಕಿಕೊಂಡಿರುವುದು ಖಚಿತವಾಗಿದೆ

ಸದರ್ ಬಜಾರ್‍ ಚಾರ್ಖಿವಾಲಿ ಗಲಿ ಖುರೇಷಿ ನಗರದ ಬಳಿ ವಸತಿ ಕಟ್ಟಡ ಇಂದು ಕುಸಿತಕ್ಕೊಳಗಾಗಿದೆ. ಈಗಾಗಲೇ ಕಟ್ಟಡದ ಅವಶೇಷಗಳಿಂದ ಐದು ಜನರನ್ನು ರಕ್ಷಣೆ ಮಾಡಲಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಇನ್ನೂ ಹಲವು ಜನ ಕಟ್ಟಡದ ಅವಶೇಷದಡಿಯಲ್ಲಿರುವ ಶಂಕೆ ವ್ಯಕ್ತವಾಗಿದೆ.

ಘಟನಾ ಸ್ಥಳದಲ್ಲಿ 6 ಅಗ್ನಿಶಾಮಕದಳ ತಂಡಗಳು ಕಾರ್ಯಚರಣೆಯಲ್ಲಿ ತೊಡಗಿದೆ. ರಕ್ಷಣಾ ಕಾರ್ಯಚರಣೆಯಲ್ಲಿ ತುರ್ತುಚಿಕಿತ್ಸೆಗಾಗಿ ತಂಡವನ್ನ ನಿಯೋಜಿಸಲಾಗಿದೆ. ಈ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದು, ಈ ಘಟನೆಯಿಂದ ತೀವ್ರ ನೋವಾಗಿದೆ. ಕಟ್ಟಡ ದುರಂತದಲ್ಲಿ ಸಿಲುಕಿಕೊಂಡಿರುವವರ ರಕ್ಷಣಾ ಕಾರ್ಯ ನಡೆಯುತ್ತಿದೆ. ಘಟನೆ ಬಗ್ಗೆ ಪ್ರತಿಕ್ಷಣದ ಮಾಹಿತಿ ಪಡೆಯುತ್ತಿದ್ದೇನೆ ಎಂದಿದ್ದಾರೆ.

Edited By : Nagaraj Tulugeri
PublicNext

PublicNext

09/02/2021 03:37 pm

Cinque Terre

51.5 K

Cinque Terre

0