ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಯುಜಿಡಿ ತಗ್ಗಿಗೆ ಬಿದ್ದ ಗೂಳಿಯ ನರಳಾಟ

ಗದಗ: ನಗರದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿಗಾಗಿ ತೆರೆಯಲಾಗಿದ್ದ ತಗ್ಗಿಗೆ ಗೂಳಿಯೊಂದು ಆಕಸ್ಮಿಕವಾಗಿ ಬಿದ್ದಿದೆ. ಕಳೆದ ತಡ ರಾತ್ರಿಯೇ ಗೂಳಿ ತಗ್ಗಿಗೆ ಬಿದ್ದಿದೆ. ಕಿರಿದಾದ ತಗ್ಗು ಇದಾಗಿದ್ದರಿಂದ ನಡುವೆ ಸಿಲುಕಿದ ಗೂಳಿ ಮೇಲೆ ಬರಲಾಗದೇ, ಅಲ್ಲೇ ಮಲಗಲಾಗದೇ, ಯಾವ ಕಡೆಯೂ ಹೊರಳಾಡಲೂ ಆಗದೇ ನಿಂತಲ್ಲೇ ನರಳಾಡಿದೆ‌.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಗೂಳಿಯನ್ನು ಮೇಲಕ್ಕೆತ್ತಿದ್ದಾರೆ.

ಅಮೃತ್ ಸಿಟಿ ಯೋಜನೆ ಅಡಿ ಈ ಕಾಮಗಾರಿ ನಡೆಯುತ್ತಿದ್ದು ತಗ್ಗು ಇರುವ ಜಾಗದ ಸುತ್ತ ಬ್ಯಾರಿಕೇಡ್ ಹಾಕದಿರುವುದೇ ಈ ಘಟನೆಗೆ ಕಾರಣ ಎಂದು ಸ್ಥಳೀಯರು ಗದಗ ನಗರಸಭೆ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Edited By : Nagaraj Tulugeri
PublicNext

PublicNext

29/01/2021 04:15 pm

Cinque Terre

70.66 K

Cinque Terre

0