ವಾಷಿಂಗ್ಟನ್: ಅಮೆರಿಕದ ಟೆಕ್ಸಾಸ್‌ನ ಮ್ಯಾಕಿ ಕರ್ರಿನ್ ಅತಿ ಉದ್ದದ ಕಾಲುಗಳನ್ನು ಹೊಂದಿದ ಮಹಿಳೆ ಎಂಬ ಗಿನ್ನೆಸ್ ವಿಶ್ವ ದಾಖಲೆ ಗಳಿಸಿದ್ದಾರೆ.
17 ವರ್ಷದ ಮ್ಯಾಕಿ ಕಾಲುಗಳು ಸುಮಾರು ಒಂದೂವರೆ ಮೀಟರ್ ಎತ್ತರ ಇವೆ. ಅವರ ಎಡಗಾಲು 135.267 ಸೆಂ.ಮೀ ಎತ್ತರವಿದ್ದರೆ, ಬಲಗಾಲು 134.3 ಸೆಂ.ಮೀ ಎತ್ತರವಿದೆ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ತಿಳಿಸಿದೆ. 6 ಅಡಿ 10 ಇಂಚು ಎತ್ತರವಿರುವ ಮ್ಯಾಕಿ, ಅಂತಹ ಅಸಾಧಾರಣ ವೈಶಿಷ್ಟ್ಯವನ್ನು ಹೊಂದಿದ್ದಕ್ಕಾಗಿ ಹೆಮ್ಮೆಪಡುತ್ತೇನೆ ಎಂದು ಹೇಳಿದ್ದಾರೆ.
PublicNext
06/10/2020 03:14 pm