ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಬಿಐ ಮಾಜಿ ನಿರ್ದೇಶಕ ಅಶ್ವನಿ ಕುಮಾರ್​ ನೇಣಿಗೆ ಶರಣು

ಶಿಮ್ಲಾ: ಸಿಬಿಐನ ಮಾಜಿ ನಿರ್ದೇಶಕ ಹಾಗೂ ನಾಗಾಲ್ಯಾಂಡ್​ ರಾಜ್ಯಪಾಲರಾಗಿದ್ದ ಅಶ್ವನಿ ಕುಮಾರ್​ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಅಶ್ವನಿ ಕುಮಾರ್ ಅವರು ಶಿಮ್ಲಾದ ತಮ್ಮ ನಿವಾಸದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೊಂದು ಆಘಾತಕಾರಿ ಘಟನೆಯಾಗಿದೆ ಎಂದು ಶಿಮ್ಲಾ ಹೆಚ್ಚುವರಿ ಪೊಲೀಸ್​ ಅಧಿಕಾರಿ ಮೋಹಿತ್​ ಚಾವ್ಲಾ ಸ್ಪಷ್ಟಪಡಿಸಿದ್ದಾರೆ.

ಅಶ್ವನಿ ಕುಮಾರ್​ ಹಿಮಾಚಲ ಪ್ರದೇಶದಲ್ಲಿ ಆಗಸ್ಟ್​ 2006ರಿಂದ ಜುಲೈ 2008ರವರೆಗೆ ಡಿಜಿಪಿಯಾಗಿ ಕಾರ್ಯನಿರ್ವಹಿಸಿದ್ದರು. ನಂತರ 2008ರಿಂದ 2010ರವರೆಗೆ ಸಿಬಿಐ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಅವರ ಸಾವಿಗೆ ಕಾರಣ ಏನೆಂಬುದು ಇನ್ನು ತಿಳಿದು ಬಂದಿಲ್ಲ. ಸ್ಥಳದಲ್ಲಿ ಸೂಸೈಡ್​ ನೋಟ್​ ಸಿಕ್ಕಿದ್ದು, 'ಇದರಲ್ಲಿ ಈ ಜೀವನ ಮುಗಿದಿದ್ದು, ಹೊಸ ಜೀವನ ಪ್ರಯಾಣಕ್ಕೆ ಹೊರಟ್ಟಿರುವೆ' ಎಂದು ಬರೆದಿದ್ದಾರೆ. ಇದನ್ನು ಸದ್ಯ ಪೊಲೀಸರು ವಶಪಡಿಸಿಕೊಂಡಿದ್ದಾರೆ. 2013 ರಿಂದ 2014ರವರೆಗೆ ನಾಗಾಲ್ಯಾಂಡ್​ ರಾಜ್ಯಪಾಲರಾಗಿ ಇವರು ಕಾರ್ಯನಿರ್ವಹಿಸಿದ್ದರು.

Edited By : Vijay Kumar
PublicNext

PublicNext

07/10/2020 10:10 pm

Cinque Terre

91.61 K

Cinque Terre

4