ಶಿಗ್ಗಾವಿ- ಅಸ್ಸಾಮ್ ಜೋಹ್ರತ್ ನಲ್ಲಿ ವಾಯುಪಡೆಯ ಫ್ಲೈಟ್ ಲೆಫ್ಟಿನಂಟ್ ಆಗಿ ಸೇವೆ ಸಲ್ಲಿಸುತ್ತಿದ್ದ ಹಾವೇರಿ ಜಿಲ್ಲೆ ಶಿಗ್ಗಾಂವಿಯ ಹೌಸಿಂಗ್ ಬೀರ್ಡ್ ನಿವಾಸಿ ಜಗದೀಶ್ ಸುತಗಟ್ಟಿ(29) ಅವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಕಳೆದ ಗುರುವಾರ ಬೆಳಿಗ್ಗೆ 5ಕ್ಕೆ ಈ ದುರ್ಘಟನೆ ನಡೆದಿದೆ. ಅಪಘಾತ ನಡೆದ ಸ್ಥಳ ಯಾವುದು ಎಂಬ ಬಗ್ಗೆ ತಿಳಿದುಬಂದಿಲ್ಲ. ಅಲ್ಲಿನ ಉನ್ನತಾಧಿಕಾರಿಗಳು ನಿಮ್ಮ ಪುತ್ರ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ ಎಂದು ಮೃತರ ಪೋಷಕರಿಗೆ ಫೋನ್ ಮಾಡಿ ಹೇಳಿದ್ದಾರೆ. ಮೃತರ ಪಾರ್ಥಿವ ಶರೀರ ಬೆಂಗಳೂರು ಮಾರ್ಗವಾಗಿ ನಾಳೆ ಬೆಳಿಗ್ಗೆ 6ಕ್ಕೆ ಶಿಗ್ಗಾವಿ ಪಟ್ಟಣ ತಲುಪಲಿದೆ. ನಾಳೆಯೇ ಅಂತ್ಯಕ್ರಿಯೆ ನಡೆಯಲಿದೆ.
PublicNext
20/11/2020 10:57 pm