ಮುಂಬೈ: ಕೊರೊನಾ ಲಾಕ್‌ಡೌನ್‌ನಿಂದಾಗಿ ಏಳು ತಿಂಗಳಿಂದ ಮುಚ್ಚಿದ್ದ ಮಹಾರಾಷ್ಟ್ರದ ಶಿರಡಿಯ ಸಾಯಿಬಾಬಾ ದೇವಸ್ಥಾನವನ್ನು ಮತ್ತೆ ತೆರೆಯಲಾಗಿದ್ದು, ಕೋವಿಡ್ ನಿಯಮಾವಳಿ ಪಾಲನೆ ಕಡ್ದಾಯವಾಗಿದೆ.
'ದರ್ಶನಕ್ಕಾಗಿ ನಿರ್ದಿಷ್ಟ ಸಮಯದ ಸಮಯ ಸ್ಲಾಟ್ ಪಡೆಯಲು ಭಕ್ತರು ಆನ್‌ಲೈನ್ ಬುಕಿಂಗ್ ಮಾಡಬೇಕಾಗುತ್ತದೆ. ಭಕ್ತರು ಕೋವಿಡ್-19 ರಿಪೋರ್ಟ್ ಅನ್ನು ದೇವಸ್ಥಾನದ ಗೇಟ್‌ನಲ್ಲಿ ತೋರಿಸಬೇಕು. ಆದರೆ 65 ವರ್ಷ ಮೇಲ್ಪಟ್ಟವರಿಗೆ, ಎಂಟರಿಂದ ಹತ್ತು ವರ್ಷದ ಮಕ್ಕಳಿಗೆ ಅವಕಾಶ ನೀಡಲಾಗುವುದಿಲ್ಲ' ಎಂದು ದೇವಾಲಯದ ಪ್ರತಿನಿಧಿ ತಿಳಿಸಿದ್ದಾರೆ.
ನವೆಂಬರ್ 16 ರ ಸೋಮವಾರದಿಂದ ಮಹಾರಾಷ್ಟ್ರದಲ್ಲಿ ಎಲ್ಲಾ ಧಾರ್ಮಿಕ ಕೇಂದ್ರಗಳು ಮತ್ತು ಪೂಜಾ ಸ್ಥಳಗಳನ್ನುತೆರೆಯಲು ಅಲ್ಲಿನ ರಾಜ್ಯ ಸರ್ಕಾರ ಶನಿವಾರ ನಿರ್ಧರಿಸಿದೆ. ಹೀಗಾಗಿ ಸೋಮವಾರ ಕಾಕಡ್ ಆರತಿ ನಂತರ ಸಾಯಿಬಾ ದರ್ಶನ ಭಕ್ತರಿಗೆ ಲಭಿಸಲಿದೆ. ದಿನಕ್ಕೆ 6,000, ಗಂಟೆಗೆ 900 ಭಕ್ತರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ ಎಂದು ವರದಿಯಾಗಿದೆ.
PublicNext
16/11/2020 12:54 pm