ಮುಂಬೈ: ಕುಡುಂಬವೊಂದು ದುರ್ಗಾ ಮೂರ್ತಿ ನಿಮಜ್ಜನಕ್ಕೆ ಕುಟುಂಬಸ್ಥರು ತೆರಳಿದ್ದ ಸಂದರ್ಭದಲ್ಲಿ ಚಿರತೆಯೊಂದು ಮನೆಗೆ ನುಗ್ಗಿದ ಘಟನೆ ಮಹಾರಾಷ್ಟ್ರದ ಸತಾರ ಜಿಲ್ಲೆಯ ಕೊಯಾನಗರ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.ಮೂರ್ತಿ ವಿಸರ್ಜಿಸಿ ಮನೆಯ ಸದಸ್ಯರೆಲ್ಲರು ವಾಪಸ್ ಬಂದಾಗ ಮನೆಯ ಬಾಗಿಲು ಮುಂದೆಯೇ ಚಿರತೆ ಕುಳಿತಿರುವುದನ್ನು ಕಂಡು ಎಲ್ಲರು ಬೆಚ್ಚಿಬಿದ್ದಿದ್ದಾರೆ.
ಸದ್ಯ ಚಿರತೆ ಮನೆಯೊಳಗಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಸದ್ಯ ಅರಣ್ಯ ಇಲಾಖೆಗೆ ಚಿರತೆ ಬಗ್ಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಚಿರತೆಯನ್ನು ಸೆರೆಹಿಡಿದಿದ್ದಾರೆ.
PublicNext
07/10/2022 01:46 pm